ಚೆನ್ನೈ ಸೂಪರ್ ಕಿಂಗ್ಸ್ಗೆ ಬಾಲಾಜಿ ಬೌಲಿಂಗ್ ಕೋಚ್
ಚೆನ್ನೈ, ಜ.19: ಚೆನ್ನೈ ಸೂಪರ್ ಕಿಂಗ್ಸ್ ನ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ನ್ಯೂಝಿಲೆಂಡ್ನ ಸ್ಟೀಫನ್ ಫ್ಲೆಮಿಂಗ್ ಕೋಚಿಂಗ್ ಸಿಬ್ಬಂದಿಗಳ ನೇತೃತ್ವವಹಿಸಿಕೊಳ್ಳಲಿದ್ದು ಭಾರತದ ಮಾಜಿ ಕ್ರಿಕೆಟಿಗ ಲಕ್ಷ್ಮೀಪತಿ ಬಾಲಾಜಿ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಎರಡು ವರ್ಷಗಳ ನಿಷೇಧದಿಂದ ಹೊರ ಬಂದಿರುವ ಚೆನ್ನೈ ತಂಡ ಈಗಾಗಲೇ ನಾಯಕ ಎಂ.ಎಸ್. ಧೋನಿ, ಆಲ್ರೌಂಡರ್ಗಳಾದ ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜರನ್ನು ತಂಡದಲ್ಲೇ ಉಳಿಸಿಕೊಂಡಿದೆ.
Next Story