ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಮೆಂಟ್ ನಲ್ಲಿ ಭಾರತ ಫೈನಲ್ ಗೆ
ತೌರಂಗಾ, ಜ.20: ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಮೆಂಟ್ ನಲ್ಲಿ ಭಾರತದ ಪುರುಷರ ಹಾಕಿ ತಂಡ ಫೈನಲ್ ಪ್ರವೇಶಿಸಿದೆ.
ಇಂದು ನಡೆದ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ 3-1 ಅಂತರದಲ್ಲಿ ಜಯ ಗಳಿಸಿದ ಭಾರತ ಫೈನಲ್ ನಲ್ಲಿ ಅವಕಾಶ ದೃಢಪಡಿಸಿದೆ. ಭಾರತದ ಹರ್ಮನ್ ಪ್ರೀತ್ ಸಿಂಗ್(2ನೇ ನಿಮಿಷ), ದಿಲ್ ಪ್ರೀತ್ ಸಿಂಗ್ (21ನೇ ನಿಮಿಷ) ಮತ್ತು ಮನ್ ದೀಪ್ ಸಿಂಗ್ (47ನೇ ನಿಮಿಷ) ತಲಾ 1 ಗೋಲು ಜಮೆ ಮಾಡಿ ಭಾರತಕ್ಕೆ ಗೆಲುವು ದೊರಕಿಸಿಕೊಟ್ಟರು. ನ್ಯೂಝಿಲೆಂಡ್ ಪರ ಕೇನ್ ರಸ್ಸೆಲ್ 42ನೇ ನಿಮಿಷದಲ್ಲಿ ಏಕೈಕ ಗೋಲು ಜಮೆ ಮಾಡಿದರು.
ರವಿವಾರ ನಡೆಯಲಿರುವ ಫೈನಲ್ ನಲ್ಲಿ ಭಾರತ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪಡೆದ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.
Next Story