ಶಾರ್ಜಾ: ಡೀಸೆಲ್ ಕಂಟೈನರ್ ಬಿದ್ದು ಭಾರತೀಯ ಮೃತ್ಯು
ದುಬೈ, ಜ. 21: ಯುಎಇಯ ಶಾರ್ಜಾದಲ್ಲಿರುವ ಖಾಲಿದ್ ಬಂದರಿನ ಸಮೀಪ ಸಣ್ಣ ಹಡಗೊಂದರಿಂದ ಸರಕು ಇಳಿಸುತ್ತಿದ್ದಾಗ ಡೀಸೆಲ್ ಕಂಟೈನರೊಂದು ಮೇಲೆ ಬಿದ್ದು 27 ವರ್ಷದ ಭಾರತೀಯ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಮಾಧ್ಯಮ ವರದಿಯೊಂದು ರವಿವಾರ ತಿಳಿಸಿದೆ.
ಮೃತನ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಘಟನೆಯ ಬಗ್ಗೆ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ತೆರಳಿದಾಗ, ವ್ಯಕ್ತಿಯು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ ಎಂದು ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.
ಸಾವಿನ ಕಾರಣ ತಿಳಿಯಲು ದೇಹವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.
Next Story