ಹೇಳಬೇಕಾದ್ದು
ಹೇಳಬೇಕಾದ್ದು ಯಾರು ಕನ್ನಡ ವಿರೋಧಿ ಎಂದಲ್ಲ
ಕನ್ನಡವನ್ನು ಬೆಳೆಸಲು ನಾನು ಇಂತಾದ್ದನ್ನು ಮಾಡಿದ್ದೇನೆಂದು
ಹೇಳಬೇಕಾದ್ದು ಯಾರು ಹಿಂದೂಗಳ ವಿರೋಧಿಗಳೆಂದಲ್ಲ
ನಾನು ಹಿಂದೂಗಳನ್ನು ಹೇಗೆ ಅಭಿವೃದ್ಧಿ ಪಡಿಸಿದ್ದೇನೆಂದು
ಹೇಳಬೇಕಾದ್ದು ಯಾರು ದಲಿತ ವಿರೋಧಿ ಎಂದಲ್ಲ
ನಾನು ದಲಿತರನ್ನು ಹೇಗೆ ಅಭಿವೃದ್ಧಿಪಡಿಸಿದ್ದೇನೆಂದು
ಹೇಳಬೇಕಾದ್ದು ಯಾರು ಮುಸ್ಲಿಂ ವಿರೋಧಿಯೆಂದಲ್ಲ
ಮುಸ್ಲಿಮರನ್ನು ನಾನು ಹೇಗೆ ಅಭಿವೃದ್ಧಿಪಡಿಸಿದ್ದೇನೆಂದು
ಹೇಳಬೇಕಾದ್ದು ಕಳ್ಳರಿಂದ ನಾನೆಷ್ಟು ಹಣ ಕಿತ್ತೆನೆಂದಲ್ಲ
ಪ್ರಾಮಾಣಿಕರಿಗೆಷ್ಟು ಹಣ ಕೊಡಿಸಿದೆನೆಂದು
ಹೇಳಬಲ್ಲೆನೇ ‘ನಾನು’
Next Story