15 ಕತ್ತರಿಗಳಲ್ಲಿ ಕೂದಲು ಕತ್ತರಿಸುವ ಅಲಿ !
ಪ್ರಪಂಚೋದ್ಯ
ಸೃಜನಶೀಲತೆಗೆ ಮಿತಿಯಿಲ್ಲ ಎಂಬುದಕ್ಕೆ ಪಾಕಿಸ್ತಾನದ ಕ್ಷೌರಿಕನೋರ್ವ ಉತ್ತಮ ಉದಾರಣೆ. ಈತ ಫ್ಯಾನ್ಸಿ ಕೂದಲ ಶೈಲಿ ರೂಪಿಸಲು ಒಂದೇ ಬಾರಿಗೆ 15 ಕತ್ತರಿಗಳನ್ನು ಬಳಸುತ್ತಾನೆ! 33ರ ಹರೆಯದ ಸಾದಿಕ್ ಅಲಿ ಲಾಹೋರ್ನಲ್ಲಿ ಪುಟ್ಟದೊಂದು ಸಲೂನ್ ಇಟ್ಟುಕೊಂಡಿದ್ದಾರೆ. ಇವರ ಸೃಜನಶೀಲವಾಗಿ ಕೂದಲು ಕತ್ತರಿಸುವ ಶೈಲಿಗೆ ಜನರು ಕಾದು ಕುಳಿತುಕೊಳ್ಳುತ್ತಾರೆ. ‘‘ನಾನು ಈ ಕೌಶಲವನ್ನು ಕರಗತ ಮಾಡಿಕೊಳ್ಳಲು ಕಳೆದ ಐದು ವರ್ಷಗಳ ಕಾಲ ಶ್ರಮಿಸಿದ್ದೇನೆ. 15 ಕತ್ತರಿಗಳನ್ನು ಒಂದು ಕೈಯಲ್ಲಿ ಒಂದೇ ಬಾರಿ ಹಿಡಿದುಕೊಳ್ಳುವುದು ಅಷ್ಟು ಸುಲಭವಲ್ಲ. ಅದು ಭಾರವಿರುತ್ತದೆ ಹಾಗೂ ಒಂದೇ ಬಾರಿ ಎಲ್ಲ ಕತ್ತರಿಗಳನ್ನು ಬಳಸಿ ಕೆಲಸ ಮಾಡುವುದು ಕಷ್ಟಕರ. ಆದಾಗ್ಯೂ, ನಿಧಾನವಾಗಿ ನಾನು 15 ಕತ್ತರಿಗಳಿಂದ ಕತ್ತರಿಸುವ ಕೌಶಲವನ್ನು ಕರಗತ ಮಾಡಿಕೊಂಡೆ. ಪ್ರತೀ ದಿನ ನನ್ನ ಸಲೂನ್ ಮುಂದೆ ಜನರು ಕ್ಯೂ ನಿಂತುಕೊಳ್ಳುತ್ತಾರೆ. ಆದರೆ, ನಾನು ದಿನಕ್ಕೆ 20 ಜನರಿಗೆ ಮಾತ್ರ ಕೂದಲ ಶೈಲಿ ಮಾಡುತ್ತೇನೆ.’’ ಎಂದು ಆಲಿ ಹೇಳಿದ್ದಾರೆ.
Next Story