ಫಹದ್ ಚಿತ್ರಕ್ಕೆ ನಸ್ರಿಯಾ ನಾಯಕಿ
ಮಲಯಾಳಂ ಚಿತ್ರರಂಗದ ಪ್ರತಿಭಾನ್ವಿತ ನಟ ಫಹದ್ ಫಾಝಿಲ್ ಜೊತೆ ವಿವಾಹದ ಬಳಿಕ ನಸ್ರಿಯಾ ನಝೀಂ, ಚಿತ್ರರಂಗಕ್ಕೆ ತುಸು ವಿರಾಮ ಹೇಳಿದ್ದರು. ಆದರೆ ‘ಬೆಂಗಳೂರು ಡೇಸ್’ ಖ್ಯಾತಿಯ ಅಂಜಲಿ ಮೆನನ್ ನಿರ್ದೇಶನದ ಮೂಲಕ ವಾಪಸಾಗುತ್ತಿರುವುದು, ಅಭಿಮಾನಿಗಳಿಗೆ ಇನ್ನಿಲ್ಲದ ಸಂತಸ ತಂದಿದೆ.
ಬಾಳಸಂಗಾತಿಗಳಾದ ಫಹದ್ ಫಾಝಿಲ್- ನಸ್ರಿಯಾ ದಂಪತಿ, ಬೆಳ್ಳಿತೆರೆಯಲ್ಲಿ ಜೊತೆಯಾಗಿ ಹೇಗೆ ಮಿಂಚಲಿದ್ದಾರೆಂಬ ಕುತೂಹಲ ಮಲಯಾಳಂ ಚಿತ್ರರಂಗದಲ್ಲೀಗ ಮೂಡಿದೆ.
ಇದೀಗ ಅವರಿಗೆ ಇನ್ನೊಂದು ಸಿಹಿಸುದ್ದಿ ದೊರೆತಿದೆ. ನಸ್ರಿಯಾ ತನ್ನ ಪತಿ ಫಾಝಿಲ್ ನಾಯಕನಾಗಿರುವ ಚಿತ್ರದಲ್ಲೂ ನಟಿಸಲು ಒಪ್ಪಿಕೊಂಡಿದ್ದಾರೆ. ‘ಟ್ರಾನ್ಸ್’ ಎಂದು ಹೆಸರಿಡಲಾದ ಈ ಚಿತ್ರಕ್ಕೆ ಅನ್ವರ್ ನಿರ್ದೇಶಕರು. ‘ಉಸ್ತಾದ್ ಹೊಟೇಲ್’ ಬಳಿಕ ನಿರ್ದೇಶನದಿಂದ ದೂರವಿದ್ದ ಅನ್ವರ್ಗೆ, ‘ಟ್ರಾನ್ಸ್’ ಕಂಬ್ಯಾಕ್ ಚಿತ್ರವಾಗಲಿದೆ. ಅಮಲ್ ನಿರಾದ್ ಕ್ಯಾಮರಾ ಹಿಡಿಯಲಿರುವ ಈ ಚಿತ್ರಕ್ಕೆ ವಿನ್ಸನ್ ವಡಕ್ಕನ್ ಚಿತ್ರಕಥೆ ಬರೆದಿದ್ದಾರೆ. ಹೀಗೆ ಪ್ರತಿಭೆಗಳ ಸಂಗಮವಾದ ‘ಟ್ರಾನ್ಸ್’ ಚಿತ್ರ, ಫಹದ್-ನಸ್ರಿಯಾ ದಂಪತಿಯ ಅಭಿನಯ ಜುಗಲ್ಬಂದಿಗೆ ಸಾಕ್ಷಿಯಾಗಲಿರುವುದಂತೂ ಖಂಡಿತ.