44 ಟನ್ ಚಾಕಲೇಟ್ ಕಳವು
ಪ್ರಪಂಚೋದ್ಯ
44 ಟನ್ ಚಾಕೊಲೇಟ್ ಹೇರಲಾಗಿದ್ದ ಎರಡು ಟ್ರಕ್ಗಳನ್ನು ದಕ್ಷಿಣ ಜರ್ಮನಿಯಿಂದ ಕಳವುಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇದು ಕಳ್ಳತನ ಪ್ರವೃತ್ತಿಯವರ ಕೃತ್ಯ ಅಲ್ಲ ಎಂದು ಅವರು ಹೇಳಿದ್ದಾರೆ. ಫಿಯೆಬರ್ಗ್ ಇಂಡಸ್ಟ್ರಿಯಲ್ ಪಾರ್ಕ್ನಿಂದ ಶುಕ್ರವಾರ 400,000 ಯುರೊ ಮೊತ್ತದ ಚಾಕಲೇಟ್ ಹೇರಿಸಲಾಗಿದ್ದ ಎರಡು ಟ್ರಕ್ ಟೈಲರ್ ಅನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜರ್ಮನ್-ಪ್ರೆಂಚ್ ಗಡಿಯ ಸಮೀಪದ ಪ್ರದೇಶದಲ್ಲಿ ಒಂದು ಟ್ರಕ್ ಟ್ರೈಲರ್ ಅನ್ನು ತಡೆ ಹಿಡಿಯಲಾಯಿತು. ಟ್ರಕ್ ಟ್ರೈಲರ್ನ ಚಾಲಕ ಇಳಿದು ಪರಾರಿಯಾಗಿದ್ದ. ಚಾಕಲೇಟ್ಗಳಿದ್ದ ಟ್ರಕ್ ಟ್ರೈಲರ್ ಅನ್ನು ವಶಪಡಿಸಿಕೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ. ಎರಡನೆ ಟ್ರಕ್ ಟ್ರೈಲರ್ ಫ್ರಾನ್ಸ್ನ ಗಡಿಯಾದ ಲೆಹ್ರ್ನಲ್ಲಿ ಪತ್ತೆಯಾಯಿತು. ಆದರೆ, ಒಟ್ಟು ಚಾಕಲೇಟ್ ಪ್ರಮಾಣದಲ್ಲಿ ಮೂರನೇ ಎರಡು ಭಾಗ ಪತ್ತೆಯಾಗಿಲ್ಲ. ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಕಳ್ಳರ ಬಗ್ಗೆ ಮಾಹಿತಿ ಇರುವವರು ತಿಳಿಸುವಂತೆ ಪೊಲೀಸರು ಕೋರಿದ್ದಾರೆ.