ಜಗತ್ತಿನ ಅತೀ ಎತ್ತರ ಅತೀ ಕುಬ್ಜರ ಫೋಟೊ ಶೂಟ್
ಪ್ರಪಂಚೋದ್ಯ
ಜಗತ್ತಿನ ಅತೀ ಎತ್ತರದ ಪುರುಷ ಹಾಗೂ ಅತೀ ಕುಬ್ಜ ಮಹಿಳೆ ಈಜಿಪ್ಟ್ಗೆ ತೆರಳಿ ಪ್ರಸಿದ್ದ ಗಿಜಾ ಪಿರೆಮಿ್ನಲ್ಲಿ ಫೋಟೊ ಶೂಟ್ ನಡೆಸಿದ್ದಾರೆ.
ಟರ್ಕಿಯ ಸುಲ್ತಾನ್ ಕೋಸೆನ್ ಜಗತ್ತಿನ ಅತೀ ಎತ್ತರದ ವ್ಯಕ್ತಿ. ಇವರ ಎತ್ತರ 251 ಸೆಂಟಿ ಮೀಟರ್ (8 ಅಡಿ 2.8 ಇಂಚು). ಇನ್ನೊಂದೆಡೆಯಲ್ಲಿ ಜಗತ್ತಿನ ಅತೀ ಕುಬ್ಜೆ ಎಂದು ಗಿನ್ನೆಸ್ ಬುಕ್ನಲ್ಲಿ ದಾಖಲಾದ ಭಾರತದ ಜ್ಯೋತಿ ಅಮ್ಗೆ ಇದ್ದಾರೆ. ಇವರ ಎತ್ತರ ಕೇವಲ 62.8 ಸೆಂಟಿಮೀಟರ್ (2 ಅಡಿ 6 ಇಂಚು).
ಈಜಿಪ್ಟ್ನಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಈಜಿಪ್ಟ್ ಪ್ರವಾಸೋದ್ಯಮ ಉತ್ತೇಜನ ಮಂಡಳಿ ಈ ಇಬ್ಬರನ್ನು ಕೈರೊದ ಅತೀ ಜನಪ್ರಿಯ ಸ್ಥಳಗಳಿಗೆ ಆಹ್ವಾನಿಸಿತ್ತು.
ಆಸಕ್ತಿದಾಯಕ ವಿಚಾರವೆಂದರೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ನ ಚರಿತ್ರೆಯಲ್ಲಿ 8 ಅಡಿ ಎತ್ತರವಿರುವ ಕೇವಲ 10 ಮಂದಿ ಮಾತ್ರ ದಾಖಲಾಗಿದ್ದಾರೆ. ಆದರೆ, ಕೋಸೆನ್ 2005ರಲ್ಲಿ 8 ಅಡಿ 95 ಇಂಚು ಇದ್ದರು. ಈ ನಡುವೆ ಅಮ್ಗೆ 2011ರಲ್ಲಿ ತನ್ನ 18ನೇ ವರ್ಷದ ಜನ್ಮ ದಿನಾಚರಣೆ ಸಂದರ್ಭ ಗಿನ್ನೆಸ್ ರೆಕಾರ್ಡ್ ಮಾಡಿದ್ದರು. ಅವರು ಪ್ರಸ್ತು ನಟಿಯಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.