varthabharthi

ಅಂತಾರಾಷ್ಟ್ರೀಯ

ಭಯೋತ್ಪಾದಕರನ್ನು ಆಶ್ರಯ ತಾಣಗಳಿಂದ ಹೊರದಬ್ಬಿ: ಪಾಕ್‌ಗೆ ಅಮೆರಿಕ ಒತ್ತಾಯ

ವಾರ್ತಾ ಭಾರತಿ : 7 Feb, 2018
Varthabharathi

ವಾಶಿಂಗ್ಟನ್, ಫೆ. 7: ತನ್ನ ನೆಲದಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕರನ್ನು, ಅದರಲ್ಲೂ ಮುಖ್ಯವಾಗಿ ತಾಲಿಬಾನ್ ನಾಯಕರನ್ನು ಗಡಿಪಾರು ಮಾಡುವಂತೆ ಅಮೆರಿಕ ಪಾಕಿಸ್ತಾನವನ್ನು ಒತ್ತಾಯಿಸಿದೆ ಎಂದು ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಜಾನ್ ಸಲಿವಾನ್ ಹೇಳಿದ್ದಾರೆ.

ಅಮೆರಿಕದ ಸಂಸತ್ತು ಕಾಂಗ್ರೆಸ್‌ನಲ್ಲಿ ಮಂಗಳವಾರ ನಡೆದ ಅಫ್ಘಾನಿಸ್ತಾನ ಕುರಿತ ವಿಚಾರಣೆಯ ವೇಳೆ, ಅವರು ಸೆನೆಟ್ ವಿದೇಶ ಸಂಬಂಧಗಳ ಸಮಿತಿಯ ಸದಸ್ಯರಿಗೆ ವಿವರಣೆ ನೀಡುತ್ತಿದ್ದರು.

‘‘ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಭಯೋತ್ಪಾದಕರಿಗೆ ಅವಕಾಶ ನೀಡಿದ ಸ್ಥಳಗಳಿಂದ ಅವರನ್ನು ಹೊರದಬ್ಬುವಂತೆ ಪಾಕಿಸ್ತಾನದ ನಮ್ಮ ಭಾಗೀದಾರರಿಗೆ ಹಲವು ಬಾರಿ ಹೇಳಿದ್ದೇವೆ’’ ಎಂದು ಅವರು ಹೇಳಿದರು.

 

Comments (Click here to Expand)