varthabharthi

ಅಂತಾರಾಷ್ಟ್ರೀಯ

‘ಮಿ ಟೂ’ ಆಂದೋಲನದ ನಾಯಕಿ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ

ವಾರ್ತಾ ಭಾರತಿ : 9 Feb, 2018
Varthabharathi

ಕ್ಯಾಲಿಫೋರ್ನಿಯಾ, ಫೆ.9: ಇಲ್ಲಿನ ಜನಪ್ರತಿನಿಧಿ ಹಾಗು ‘ಮಿ ಟೂ’ ಆಂದೋಲನದ ನಾಯಕಿ ಕ್ರಿಸ್ಟಿನಾ ಗಾರ್ಸಿಯಾ ವಿರುದ್ಧ ಪುರುಷರೊಬ್ಬರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ.

ಡೇನಿಯಲ್ ಫಿಯೆರೋ ಎಂಬವರು ಈ ಆರೋಪ ಮಾಡಿದ್ದು,2014ರಲ್ಲಿ ನಡೆದ ಸಾಫ್ಟ್ ಬಾಲ್ ಗೇಮ್ ನಂತರ ಕ್ರಿಸ್ಟಿನಾ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು. ತನ್ನ ಖಾಸಗಿ ಭಾಗಗಳನ್ನು ಮುಟ್ಟಿದ್ದರು ಎಂದಿದ್ದಾರೆ,

ಈ ಬಗ್ಗೆ ಅಸೆಂಬ್ಲಿಯು ವಿಚಾರಣೆಯನ್ನು ಆರಂಭಿಸಿದೆ. ತನ್ನ ಬಗ್ಗೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿರುವ ವಿಚಾರ ಗಾರ್ಸಿಯಾರಿಗೆ ಜನವರಿ 23ರಂದು ತಿಳಿಯಿತು ಎಂದು ಅವರ ವಕ್ತಾರೆ ಹೇಳಿದ್ದಾರೆ.

“ಲೈಂಗಿಕ ಕಿರುಕುಳದ ಬಗ್ಗೆ ದಾಖಲಾಗುವ ಪ್ರತಿಯೊಂದು ಪ್ರಕರಣಗಳನ್ನೂ ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ತನಿಖೆ ನಡೆದರೂ ನಾನು ಸಹಕರಿಸುತ್ತೇನೆ” ಎಂದು ಗಾರ್ಸಿಯಾ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.

 

Comments (Click here to Expand)