ಬಾಲಿವುಡ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ‘ಪ್ಯಾಡ್ ಮ್ಯಾನ್’
ಹೊಸದಿಲ್ಲಿ, ಫೆ.9: ಅಕ್ಷಯ್ ಕುಮಾರ್ ನಟನೆಯ ಪ್ಯಾಡ್ ಮ್ಯಾನ್ ಚಿತ್ರ ಈಗಾಗಲೇ ಬಿಡುಗಡೆಯಾಗಿದ್ದು. ವಿಮರ್ಶಕರಿಂದ ಹಾಗು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ವಿಭಿನ್ನ ಕಥಾಹಂದರ, ಮುಖ್ಯವಾಗಿ ಋತುಚಕ್ರದ ಬಗ್ಗೆ ಕಥೆಯನ್ನು ಹೊಂದಿರುವುದರಿಂದ ಬಿಡುಗಡೆಗೂ ಮುನ್ನವೇ ಈ ಚಿತ್ರ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು,
ಇಷ್ಟೇ ಅಲ್ಲದೆ ಈ ಕಥಾಹಂದರವಿರುವ ಮೊದಲ ಬಾಲಿವುಡ್ ಚಿತ್ರ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಇದರೊಂದಿಗೆ ರಶ್ಯಾದಲ್ಲಿ ಬಿಡುಗಡೆಯಾಗುತ್ತಿರುವ ಬಾಲಿವುಡ್ ನ ಪ್ರಪ್ರಥಮ ಚಿತ್ರವಾಗಿ ದಾಖಲೆ ಬರೆದಿದೆ ಪ್ಯಾಡ್ ಮ್ಯಾನ್. ಬಾಲಿವುಡ್ ಇತಿಹಾಸದಲ್ಲೇ ಇದೊಂದು ವಿಶಿಷ್ಟ ದಾಖಲೆಯಾಗಿದೆ.
“ನಮ್ಮ ಚಿತ್ರ ಪ್ಯಾಡ್ ಮ್ಯಾನ್ ರಶ್ಯಾದಲ್ಲಿ ಬಿಡುಗಡೆಯಾಗುತ್ತಿದೆ. ರಶ್ಯಾದಲ್ಲಿ ಬಿಡುಗಡೆಯಾಗುತ್ತಿರುವ ಪ್ರಪ್ರಥಮ ಚಿತ್ರ ಇದಾಗಿದೆ” ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಚಿತ್ರ ಈಗಾಗಲೇ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ, ಅಕ್ಷಯ್ ಕುಮಾರ್, ರಾಧಿಕಾ ಆಪ್ಟೆ, ಸೋನಂ ಕಪೂರ್ ಮುಖ್ಯಭೂಮಿಕೆಯ ಈ ಚಿತ್ರವನ್ನು ಆರ್.ಬಾಲ್ಕಿ ನಿರ್ದೇಶಿಸಿದ್ದಾರೆ.