varthabharthi

ಅಂತಾರಾಷ್ಟ್ರೀಯ

ಫೆಲೆಸ್ತೀನ್, ಯುಎಇ, ಒಮನ್ ಪ್ರವಾಸ: ಜೋರ್ಡಾನ್ ರಾಜಧಾನಿ ಅಮ್ಮಾನ್ ತಲುಪಿದ ಮೋದಿ

ವಾರ್ತಾ ಭಾರತಿ : 9 Feb, 2018

ಅಮ್ಮಾನ್ (ಜೋರ್ಡಾನ್), ಫೆ. 9: ಪಶ್ಚಿಮ ಏಶ್ಯದ 3 ದೇಶಗಳ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಜೋರ್ಡಾನ್ ರಾಜಧಾನಿ ಅಮ್ಮಾನ್ ತಲುಪಿದ್ದಾರೆ.

ಫೆಲೆಸ್ತೀನ್, ಯುಎಇ ಮತ್ತು ಒಮನ್ ಪ್ರಧಾನಿ ಭೇಟಿ ನೀಡಲಿರುವ ದೇಶಗಳು. ಅವರ ಅಧಿಕೃತ ಪ್ರವಾಸ ಶನಿವಾರ ಫೆಲೆಸ್ತೀನ್ ದೇಶದೊಂದಿಗೆ ಆರಂಭಗೊಳ್ಳಲಿದೆ.

ಫೆಲೆಸ್ತೀನ್‌ಗೆ ಹೋಗುವ ಮಾರ್ಗವಾಗಿ ಶುಕ್ರವಾರ ಜೋರ್ಡಾನ್ ತಲುಪಿರುವ ಅವರು, ಶನಿವಾರ ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಫೆಲೆಸ್ತೀನ್‌ಗೆ ಪ್ರಯಾಣಿಸುವರು.

ಶುಕ್ರವಾರ ಸಂಜೆ ಅವರು ಅಮ್ಮಾನ್‌ನಲ್ಲಿ ಜೋರ್ಡಾನ್ ದೊರೆ ಅಬ್ದುಲ್ಲಾರನ್ನು ಭೇಟಿಯಾದರು.

ಜೋರ್ಡಾನ್ ಪ್ರಧಾನಿ ಹನಿ ಅಲ್-ಮುಲ್ಕಿ ಅಮ್ಮಾನ್‌ನಲ್ಲಿ ಭಾರತೀಯ ಪ್ರಧಾನಿಯನ್ನು ಸ್ವಾಗತಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)