varthabharthi

ಅಂತಾರಾಷ್ಟ್ರೀಯ

ಶಿಕಾಗೊದಲ್ಲಿ ಭಾರೀ ಹಿಮಪಾತ: 2 ಸಾವು

ವಾರ್ತಾ ಭಾರತಿ : 10 Feb, 2018
Varthabharathi

ಶಿಕಾಗೊ, ಫೆ. 10: ಅಮೆರಿಕದ ಉತ್ತರ ಭಾಗದಲ್ಲಿ ಶುಕ್ರವಾರ ಪ್ರಬಲ ಹಿಮ ಮಾರುತ ಬೀಸಿದ್ದು, ಶಿಕಾಗೊದಲ್ಲಿ 23 ಇಂಚುವರೆಗೆ ಹಿಮ ಸುರಿಸಿದೆ.

ಈ ಸಂದರ್ಭದಲ್ಲಿ ಇಬ್ಬರು ಮೃತಪಟ್ಟಿದ್ದು, ನೂರಾರು ವಿಮಾನಗಳ ಹಾರಾಟ ವ್ಯತ್ಯಯಗೊಂಡಿದೆ.

ಶಿಕಾಗೊದ ಮೆಟ್ರೊಪಾಲಿಟನ್ ಪ್ರದೇಶವನ್ನು ಮಂಜಿನ ರಾಶಿ ಆವರಿಸಿದೆ. ಇದುದ 2016ರ ಬಳಿಕದ ಪ್ರಬಲ ಹಿಮಪಾತವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಹೆಚ್ಚಿನ ಪ್ರದೇಶಗಳಲ್ಲಿ ಗಾಳಿಯ ಉಷ್ಣತೆ ಇನ್ನಷ್ಟು ಕುಸಿದು ಮೈನಸ್ 18 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

 

Comments (Click here to Expand)