varthabharthi

ಅಂತಾರಾಷ್ಟ್ರೀಯ

ತೈವಾನ್ ಭೂಕಂಪ: ಮೃತರ ಸಂಖ್ಯೆ 14ಕ್ಕೇರಿಕೆ

ವಾರ್ತಾ ಭಾರತಿ : 10 Feb, 2018
Varthabharathi

ತೈಪೆ (ತೈವಾನ್), ಫೆ. 10: ತೈವಾನ್‌ನಲ್ಲಿ ನಡೆದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಶನಿವಾರ 14ಕ್ಕೇರಿದೆ. ಚೀನೀ ಪ್ರವಾಸಿ ಕುಟುಂಬವೊಂದರ ನಾಪತ್ತೆಯಾಗಿರುವ ಸದಸ್ಯರಿಗಾಗಿ ಶೋಧ ನಡೆಸುತ್ತಿದ್ದ ರಕ್ಷಣಾ ಸಿಬ್ಬಂದಿ ಆಂಶಿಕವಾಗಿ ಕುಸಿದ ಕಟ್ಟಡವೊಂದರಲ್ಲಿ ಇಬ್ಬರ ಶವಗಳನ್ನು ಪತ್ತೆಹಚ್ಚಿದೆ.

ಭೂಕಂಪದ ಬಳಿಕ 50 ಡಿಗ್ರಿ ಕೋನದಲ್ಲಿ ವಾಲಿ ನಿಂತಿದ್ದ 12 ಮಹಡಿಗಳ ಕಟ್ಟಡದ ತಳದಲ್ಲಿರುವ ಅವಶೇಷಗಳಡಿ ರಕ್ಷಣಾ ಸಿಬ್ಬಂದಿ ಶೋಧ ನಡೆಸಿದರು.

ಆಗ ಎರಡು ಶವಗಳು ಪತ್ತೆಯಾಗಿವೆ. ಈ ಇಬ್ಬರು ಹಾಗೂ ನಾಪತ್ತೆಯಾಗಿರುವ ಇನ್ನೂ ಮೂವರು ಸೋಮವಾರ ಬೀಜಿಂಗ್‌ನಿಂದ ತೈವಾನ್‌ಗೆ ಬಂದ ಕುಟುಂಬವೊಂದರ ಸದಸ್ಯರು ಎಂದು ಭಾವಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅವರು ಭೂಕಂಪ ಸಂಭವಿಸಿದ ಹುವಾಲೀನ್ ನಗರದ ಹೊಟೇಲ್ ಕಟ್ಟಡದ ಎರಡನೆ ಮಹಡಿಯಲ್ಲಿ ತಂಗಿದ್ದರು.

 

Comments (Click here to Expand)