varthabharthi

ಅಂತಾರಾಷ್ಟ್ರೀಯ

ಶ್ರೀಲಂಕಾ ಸ್ಥಳೀಯಾಡಳಿತ ಚುನಾವಣೆ: ರಾಜಪಕ್ಸೆಗೆ ಮುನ್ನಡೆ

ವಾರ್ತಾ ಭಾರತಿ : 11 Feb, 2018
Varthabharathi

ಕೊಲಂಬೊ,ಫೆ.11: ಶ್ರೀಲಂಕಾದ ಸ್ಥಳೀಯಾಡಳಿತ ಚುನಾವಣೆಯಲ್ಲಿ ಆಡಳಿತಾರೂಢ ಮೈತ್ರಿಕೂಟಕ್ಕೆ ಭಾರೀ ಮುಖಭಂಗವಾಗಿದ್ದು ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ನೇತೃತ್ವದ ಶ್ರೀಲಂಕಾ ಪೊದುಜನ ಪೆರಮುನಾ (ಎಸ್‌ಎಲ್‌ಪಿಪಿ) ಭರ್ಜರಿ ಜಯದೆಡೆಗೆ ಸಾಗಿದೆ.

    ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹಾಗೂ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ನೇತೃತ್ವದ ಪಕ್ಷಗಳು ಚುನಾವಣೆಯಲ್ಲಿ ಭಾರೀ ಪರಾಭವ ಕಂಡಿವೆ. ರವಿವಾರ ಮತಏಣಿಕೆ ಆರಂಭವಾಗಿದ್ದು, ಫಲಿತಾಂಶ ಪ್ರಕಟವಾದ 182 ನಗರಾಡಳಿತ ಸಂಸ್ಥೆಗಳ ಪೈಕಿ, ಎಸ್‌ಎಲ್‌ಪಿಪಿ ಪಕ್ಷವು 143ನ್ನು ಗೆದ್ದುಕೊಂಡಿದೆ. ವಿಕ್ರಮಸಿಂಘೆ ಅವರ ಯುನೈಟೆಡ್ ನ್ಯಾಶನಲ್ ಪಾರ್ಟಿ ಪಕ್ಷವು ಕಪೆ ಸಾಧನೆ ಮಾಡಿದ್ದು ಕೇವಲ 17 ನಗರಾಡಳಿತ ಮಂಡಳಿಗಳಲ್ಲಿ ಬಹುಮತ ಪಡೆದಿದೆ. ಮಿತ್ರಪಕ್ಷವಾದ ಸಿರಿಸೇನಾರ ಫ್ರೀಡಂ ಆಲಾಯನ್ಸ್ ಕೇವಲ ಏಳು ನಗರಾಡಳಿತ ಸಂಸ್ಥೆಗಳಲ್ಲಿ ಗೆಲುವು ಸಾಧಿಸಿದೆ.

 

Comments (Click here to Expand)