ಸೋಲ್ನಲ್ಲಿ ಉ.ಕೊರಿಯ ವಿರುದ್ಧ ಪ್ರತಿಭಟನೆ
ಸೋಲ್,ಫೆ.11: ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಅವರ ಸಹೋದರಿಯ ಆಗಮನವನ್ನು ಪ್ರತಿಭಟಿಸಿ ರವಿವಾರ ದಕ್ಷಿಣ ಕೊರಿಯದ ಪ್ರಜಾಪ್ರಭುತ್ವವಾದಿ ಕಾರ್ಯಕರ್ತರು ಉತ್ತರ ಕೊರಿಯದ ಧ್ವಜಗಳನ್ನು ದಹಿಸಿದ್ದಾರೆ. ಚಳಿಗಾಲದ ಒಲಿಂಪಿಕ್ಸ್ನ ವೀಕ್ಷಣೆಗಾಗಿ ಆಗಮಿಸಿರುವ ಕಿಮ್ ಜೊಂಗ್ ಅವರ ಸಹೋದರಿ ಕಿಮ್ ಯೊ ಯೊಂಗ್ ಹಾಗೂ ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ ಅವರು ಸಂಗೀತ ಕಾರ್ಯಕ್ರಮವೊಂದನ್ನು ವೀಕ್ಷಿಸಲು ಆಗಮಿಸಲಿದ್ದ ರಂಗಮಂದಿರವೊಂದರ ಬಳಿ ಪ್ರತಿಭಟನಕಾರರು ಉತ್ತರ ಕೊರಿಯದ ಧ್ವಜವನ್ನು ದಹಿಸಿದ್ದಾರೆ.
ಹಲವಾರು ದಶಕಗಳ ದೀರ್ಘ ವೈಮನಸ್ಸಿನ ಬಳಿಕ ಉತ್ತರ ಕೊರಿಯಾವು ಇದೇ ಮೊದಲ ಬಾರಿಗೆ ಸಿಯೋಲ್ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್ಗೆ ತನ್ನ ನೂರಾರು ಅಥ್ಲೀಟ್ಗಳನ್ನು ಕಳುಹಿಸಿಕೊಟ್ಟಿತ್ತು.
Next Story