varthabharthi

ಅಂತಾರಾಷ್ಟ್ರೀಯ

ಇಂಡೊನೇಶ್ಯ: ಬಸ್ ದುರಂತಕ್ಕೆ 27 ಬಲಿ

ವಾರ್ತಾ ಭಾರತಿ : 11 Feb, 2018

ಜಕಾರ್ತ,ಫೆ.11: ಇಂಡೊನೇಶ್ಯದ ಮುಖ್ಯದ್ವೀಪವಾದ ಜಕಾರ್ತದಲ್ಲಿ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ಬಸ್ಸೊಂದು ಮೋಟಾರ್‌ಬೈಕ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾಸಿಗರಿಂದ ತುಂಬಿದ್ದ ಈ ಬಸ್ ಜಕಾರ್ತದ ಉಪನಗರವಾದ ತಾಂಗೆರಾಂಗ್‌ಗೆ ತೆರಳುತ್ತಿದ್ದಾಗ ಅಪಘಾತಕ್ಕೀಡಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರಸಿದ್ಧ ಪರ್ವತಧಾಮವಾದ ತಾಂಗ್‌ಕುಬಾನ್ ಪೆರಾಹುವಿನಿಂದ ವಾಪಾಸಾಗುತ್ತಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)