varthabharthi

ಅಂತಾರಾಷ್ಟ್ರೀಯ

ಬ್ರಿಟನ್: ಕಾನೂನು ಹೋರಾಟದಲ್ಲಿ ಮಲ್ಯಗೆ ಸೋಲು: 90 ಮಿಲಿಯನ್ ಡಾಲರ್ ಪಾವತಿಗೆ ಕೋರ್ಟ್ ಆದೇಶ

ವಾರ್ತಾ ಭಾರತಿ : 12 Feb, 2018

ಲಂಡನ್. ಫೆ.12: ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಸಂಬಂಧಿಸಿಸ ಕಾನೂನು ಹೋರಾಟವೊಂದರಲ್ಲಿ ಮದ್ಯದ ದೊರೆ ವಿಜಯ್ ಮಲ್ಯಗೆ ಸೋಲಾಗಿದ್ದು,  ಸಿಂಗಾಪುರ ಮೂಲದ ಕಂಪೆನಿಯೊಂದಕ್ಕೆ 90 ಮಿಲಿಯನ್ ಡಾಲರ್ ಪಾವತಿಸುವಂತೆ ಲಂಡನ್  ನ್ಯಾಯಾಲಯವು ಆದೇಶಿಸಿದೆ.

ವಿಮಾನಗಳ ಲೀಸ್ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಂಗಾಪುರ ಮೂಲದ ಕಂಪೆನಿ, ತೀರ್ಪಿನಿಂದ ನಾವು ಸಂತೋಷಗೊಂಡಿದ್ದೇವೆ. ಈ ಸಂದರ್ಭದಲ್ಲಿ ಈ ಬಗ್ಗೆ ಹೆಚ್ಚೇನೂ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ” ಎಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)