ಸೌದಿ, ಪಾಕ್ ಜಂಟಿ ನೌಕಾಭ್ಯಾಸ
ಸಾಂದರ್ಭಿಕ ಚಿತ್ರ
ಜಿದ್ದಾ, ಫೆ. 12: ಪಾಕಿಸ್ತಾನಿ ನೌಕಾಪಡೆ ಮತ್ತು ಸೌದಿ ಅರೇಬಿಯದ ರಾಯಲ್ ಸೌದಿ ನೌಕಾ ಪಡೆಗಳ ಜಂಟಿ ನೌಕಾಭ್ಯಾಸ ರವಿವಾರ ಅರೇಬಿಯನ್ ಕೊಲ್ಲಿಯಲ್ಲಿರುವ ಕಿಂಗ್ ಅಬ್ದುಲಝೀಝ್ ನೌಕಾ ನೆಲೆಯಲ್ಲಿರುವ ಈಸ್ಟ್ ಫ್ಲೀಟ್ನಲ್ಲಿ ಆರಂಭಗೊಂಡಿದೆ ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ.
‘‘ಈ ಅಭ್ಯಾಸಗಳ ಮೂಲಕ, ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು, ಯುದ್ಧ ಸಿದ್ಧತೆಯನ್ನು ಹೆಚ್ಚಿಸಲು ಮತ್ತು ಎರಡು ದೇಶಗಳ ನಡುವಿನ ಸಹಕಾರವನ್ನು ಬಲಪಡಿಸಲು ನಾವು ಬಯಸಿದ್ದೇವೆ’’ ಎಂದು ರಾಯಲ್ ಸೌದಿ ನೌಕಾ ಪಡೆಗಳ ಈಸ್ಟರ್ನ್ ಫ್ಲೀಟ್ ರಿಯರ್ ಅಡ್ಮಿರಲ್ ಲಾಫಿ ಬಿನ್ ಹುಸೈನ್ ಅಲ್-ಹರ್ಬಿ ಹೇಳಿದರು.
Next Story