varthabharthi

ರಾಷ್ಟ್ರೀಯ

ಮನಕಲಕುವ ಫೋಟೊ ವೈರಲ್

ತಾಯಿ ಮೃತಪಟ್ಟ ವಿಷಯ ತಿಳಿಯದೆ ಮೃತದೇಹದ ಪಕ್ಕವೇ ಮಲಗಿದ ಬಾಲಕ

ವಾರ್ತಾ ಭಾರತಿ : 13 Feb, 2018
Varthabharathi

ಹೈದರಾಬಾದ್,ಫೆ.13 : ಐದು ವರ್ಷದ ಬಾಲಕನೊಬ್ಬ ಇಲ್ಲಿನ ಒಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ತನ್ನ ತಾಯಿಯ ಶವದ ಪಕ್ಕದಲ್ಲಿಯೇ ಗಾಢ ನಿದ್ದೆಗೆ ಜಾರಿರುವ ಮನಕಲಕುವ ಫೋಟೋ ಒಂದು  ವೈರಲ್ ಆಗಿದೆ. ಹೃದಯ ಸಂಬಂಧಿ ಸಮಸ್ಯೆ ಎದುರಿಸುತ್ತಿದ್ದ ತನ್ನ ತಾಯಿಯ ಜತೆ ಬಾಲಕ ರವಿವಾರ ರಾತ್ರಿ ಆಸ್ಪತ್ರೆಗೆ ಬಂದಿದ್ದ. ಆಕೆಯನ್ನು ಉಳಿಸಲು ವೈದ್ಯರು ಸತತ ಪ್ರಯತ್ನ ನಡೆಸಿದ್ದರೂ ಸಫಲರಾಗಿರಲಿಲ್ಲ.

ಆದರೆ ಬಾಲಕ ಮಾತ್ರ ತನ್ನ ತಾಯಿ ಸತ್ತಿದ್ದಾಳೆಂಬ ಅರಿವಿಲ್ಲದೆ ರಾತ್ರಿಯಿಡೀ ಆಕೆಯ ಶವದ ಪಕ್ಕದಲ್ಲಿಯೇ ಮಲಗಿದ್ದ ಎಂದು ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ಮರುದಿನ ಆಸ್ಪತ್ರೆಯ ಸಿಬ್ಬಂದಿ ಮಹಿಳೆಯ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕೊಂಡೊಯ್ಯುವಾಗಲೂ ಬಾಲಕ ಜೋರಾಗಿ ಅತ್ತು ತಾಯಿಯ ನಿಶ್ಚಲ ದೇಹವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ.

ಮೃತ ಮಹಿಳೆಯನ್ನು ಸಮೀನಾ ಸುಲ್ತಾನ (36) ಎಂದು ಗುರುತಿಸಲಾಗಿದೆ.

ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ಕಾರ್ಯಕರ್ತರು ಸತತ 18 ಗಂಟೆಗಳ ಪ್ರಯತ್ನದ ಫಲವಾಗಿ ಮಹಿಳೆಯ ಕುಟುಂಬವನ್ನು ಪತ್ತೆ ಹಚ್ಚಿ ಬಾಲಕನನ್ನು ಆತನ ಮಾವನ ಜತೆ ಕಳುಹಿಸಿಕೊಟ್ಟಿದ್ದಾರೆ.

 

Comments (Click here to Expand)