varthabharthi

ಅಂತಾರಾಷ್ಟ್ರೀಯ

2ನೆ ಮಹಾಯುದ್ಧ ಕಾಲದ ಬಾಂಬ್ ಸುರಕ್ಷಿತ ವಿಲೇವಾರಿ: ವಿಮಾನ ನಿಲ್ದಾಣ ಪುನಾರಂಭ

ವಾರ್ತಾ ಭಾರತಿ : 13 Feb, 2018
Varthabharathi

ಲಂಡನ್, ಫೆ. 13: ಥೇಮ್ಸ್ ನದಿಯಲ್ಲಿ ಪತ್ತೆಯಾದ ದ್ವಿತೀಯ ಮಹಾಯುದ್ಧ ಕಾಲದ ಬಾಂಬೊಂದನ್ನು ಸುರಕ್ಷಿತವಾಗಿ ತೆಗೆದ ಬಳಿಕ, ಮಂಗಳವಾರ ಲಂಡನ್‌ನ ನಗರ ವಿಮಾನ ನಿಲ್ದಾಣ ಎಂದಿನಂತೆ ತನ್ನ ಚಟುವಟಿಕೆಗಳನ್ನು ಆರಂಭಿಸಿದೆ.

  ಪೂರ್ವ ಲಂಡನ್‌ನ ಐದನೆ ಜಾರ್ಜ್ ಡಾಕ್‌ನ ಸಮೀಪ 500 ಕಿ.ಗ್ರಾಂ ಭಾರದ ಬಾಂಬ್ ಪತ್ತೆಯಾದ ಬಳಿಕ ಸೋಮವಾರ ವಿಮಾನ ನಿಲ್ದಾಣದ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು ಹಾಗೂ 200 ಮೀಟರ್ ತ್ರಿಜ್ಯದಲ್ಲಿ ಸುರಕ್ಷಾ ವಲಯವೊಂದನ್ನು ನಿರ್ಮಿಸಲಾಗಿತ್ತು.

‘‘ಕಿಂಗ್ ಐದನೆ ಜಾರ್ಜ್ ಡಾಕ್ ಸಮೀಪ ಪತ್ತೆಯಾದ ಎರಡನೆ ಮಹಾಯುದ್ಧ ಕಾಲದ ಬಾಂಬನ್ನು ರಾಯಲ್ ನೌಕಾಪಡೆ ಮತ್ತು ಮೆಟ್ರೊಪಾಲಿಟನ್ ಪೊಲೀಸರು ಸುರಕ್ಷಿತವಾಗಿ ವಿಲೇವಾರಿ ಮಾಡಿದ್ದಾರೆ’’ ಎಂದು ಲಂಡನ್ ಸಿಟಿ ವಿಮಾನ ನಿಲ್ದಾಣದ ಸಿಇಒ ರಾಬರ್ಟ್ ಸಿಂಕ್ಲೇರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

 

Comments (Click here to Expand)