varthabharthi

ಅಂತಾರಾಷ್ಟ್ರೀಯ

ಸಿಂಗಾಪುರ: ಗಲ್ಲಿಗೇರಲಿದ್ದ ಭಾರತ ಮೂಲದ ವ್ಯಕ್ತಿ ದೋಷಮುಕ್ತ

ವಾರ್ತಾ ಭಾರತಿ : 13 Feb, 2018
Varthabharathi

ಸಿಂಗಾಪುರ, ಫೆ. 13: ಅಪರೂಪದ ಪ್ರಕರಣವೊಂದರಲ್ಲಿ, ಮಾದಕ ದ್ರವ್ಯ ಹೊಂದಿದ ಆರೋಪದಲ್ಲಿ ಸಿಂಗಾಪುರದಲ್ಲಿ ಮರಣ ದಂಡನೆಗೆ ಗುರಿಯಾಗಿದ್ದ ಭಾರತ ಮೂಲದ ಮಲೇಶ್ಯನ್ ವ್ಯಕ್ತಿಯೊಬ್ಬರನ್ನು ದೇಶದ ಅತ್ಯುನ್ನತ ನ್ಯಾಯಾಲಯವು ದೋಷಮುಕ್ತಗೊಳಿಸಿದೆ.

ತಾನು ಸಿಂಗಾಪುರಕ್ಕೆ ಹೋಗುತ್ತಿದ್ದ ಮೋಟರ್‌ಸೈಕಲ್‌ನಲ್ಲಿ ಮಾದಕ ದ್ರವ್ಯವನ್ನು ಅಡಗಿಸಿಡಲಾಗಿತ್ತು ಎಂಬುದು ತನಗೆ ಗೊತ್ತಿರಲಿಲ್ಲ ಎನ್ನುವುದನ್ನು ಗೋಪು ಜಯರಾಮನ್ ಯಶಸ್ವಿಯಾಗಿ ಸಾಬೀತುಪಡಿಸಿದ್ದಾರೆ ಎಂದು ಮಂಗಳವಾರ ನೀಡಿದ ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ.

2014 ಮಾರ್ಚ್ 24ರಂದು ಗೋಪು ವುಡ್‌ಲ್ಯಾಂಡ್ಸ್ ಚೆಕ್‌ಪಾಯಿಂಟ್ ಮೂಲಕ ಸಿಂಗಾಪುರ ಪ್ರವೇಶಿಸುತ್ತಿದ್ದಾಗ ಅವರನ್ನು ಬಂಧಿಸಲಾಗಿತ್ತು. ಅವರ ಮೋಟರ್‌ಸೈಕಲ್‌ನಲ್ಲಿ ‘ಡಯಾಮಾರ್ಫಿನ್’ನ 3 ಕಪ್ಪು ಬಂಡಲ್‌ಗಳನ್ನು ಅಡಗಿಸಿಡಲಾಗಿತ್ತು.

 

Comments (Click here to Expand)