varthabharthi

ಅಂತಾರಾಷ್ಟ್ರೀಯ

ಇರಾನ್ ವಿರುದ್ಧ ಬೇಹುಗಾರಿಕೆಗೆ ಈ ‘ಪ್ರಾಣಿ’ಗಳನ್ನು ಬಳಸಲಾಗಿತ್ತಂತೆ?

ವಾರ್ತಾ ಭಾರತಿ : 13 Feb, 2018

ಟೆಹರಾನ್ (ಇರಾನ್), ಫೆ. 13: ಇರಾನ್‌ನ ಪರಮಾಣು ಕಾರ್ಯಕ್ರಮದ ಬಗ್ಗೆ ಬೇಹುಗಾರಿಕೆ ನಡೆಸಲು ಪಾಶ್ಚಿಮಾತ್ಯ ಬೇಹುಗಾರರು ‘ಪರಮಾಣು ತರಂಗಗಳನ್ನು ಸೆಳೆಯಬಲ್ಲ’ ಹಲ್ಲಿಗಳನ್ನು ಬಳಸಿದ್ದರು ಎಂದು ಇರಾನ್ ಸಶಸ್ತ್ರ ಪಡೆಗಳ ಮಾಜಿ ಮುಖ್ಯಸ್ಥ ಹಸನ್ ಫಿರುಝಾಬಾದಿ ಹೇಳಿದ್ದಾರೆ.

ಇತ್ತೀಚೆಗೆ ಪರಿಸರವಾದಿಗಳನ್ನು ಬಂಧಿಸಿರುವ ಬಗ್ಗೆ ಸ್ಥಳೀಯ ಪತ್ರಿಕೆಗಳ ಪ್ರಶ್ನೆಗಳಿಗೆ ದೇಶದ ಅತ್ಯುನ್ನತ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಹಿರಿಯ ಸೇನಾ ಸಲಹೆಗಾರರೂ ಆದ ಅವರು ಉತ್ತರಿಸುತ್ತಿದ್ದರು.

ಪ್ರಕರಣಗಳ ವಿವರಗಳು ತನಗೆ ತಿಳಿದಿಲ್ಲ ಎಂದ ಅವರು, ಆದರೆ, ಪಾಶ್ಚಿಮಾತ್ಯ ದೇಶಗಳು ಪ್ರವಾಸಿಗರು, ವಿಜ್ಞಾನಿಗಳು ಮತ್ತು ಪರಿಸರವಾದಿಗಳನ್ನು ಇರಾನ್ ವಿರುದ್ಧ ಬೇಹುಗಾರಿಕೆ ನಡೆಸಲು ಬಳಸಿದ್ದರು ಎಂದರು.

‘‘ಕೆಲವು ವರ್ಷಗಳ ಹಿಂದೆ ಫೆಲೆಸ್ತೀನೀಯರಿಗಾಗಿ ನಿಧಿ ಸಂಗ್ರಹಿಸಲು ಕೆಲವರು ಇರಾನ್‌ಗೆ ಬಂದಿದ್ದರು. ಅವರ ವಶದಲ್ಲಿ ಹಲ್ಲಿಗಳು ಮತ್ತು ಓತಿಕ್ಯಾತ ಮುಂತಾದ ಮರುಭೂಮಿಯ ಪ್ರಾಣಿಗಳು ಇರುವುದನ್ನು ನಾವು ಕಂಡೆವು. ಅವುಗಳ ಚರ್ಮವು ಪರಮಾಣು ತರಂಗಗಳನ್ನು ಆಕರ್ಷಿಸುವುದನ್ನು ನಾವು ಪತ್ತೆಹಚ್ಚಿದೆವು. ಅವರು ಪರಮಾಣು ಬೇಹುಗಾರರಾಗಿದ್ದರು. ಇರಾನ್‌ನಲ್ಲಿ ಎಲ್ಲಿ ಯುರೇನಿಯಂ ಗಣಿಗಳಿವೆ ಮತ್ತು ನಾವು ಎಲ್ಲಿ ಪರಮಾಣು ಚಟುವಟಿಕೆಗಳಲ್ಲಿ ತೊಡಗಿದ್ದೇವೆ ಎನ್ನುವುದನ್ನು ತಿಳಿಯಲು ಅವರು ಬಯಸಿದ್ದರು’’ ಎಂದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)