ಗಾಯಾಳು ವೇಗಿ ಜಾಕ್ಸನ್ ಹೊರಕ್ಕೆ
ಆಸ್ಟ್ರೇಲಿಯ-ದಕ್ಷಿಣ ಆಫ್ರಿಕ ಟೆಸ್ಟ್ ಪಂದ್ಯ
ಸಿಡ್ನಿ, ಫೆ.13: ಆಫ್ರಿಕ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯಗಳಿಗೆ ಮಣಿಗಂಟು ನೋವಿನಿಂದ ಬಳಲುತ್ತಿರುವ ಆಸ್ಟ್ರೇಲಿಯದ ವೇಗಿ ಜಾಕ್ಸನ್ ಬರ್ಡ್ ಲಭ್ಯರಿಲ್ಲ. ಅವರ ಬದಲಿಗೆ ಸಹ ವೇಗಿ ಚಡ್ ಸೇಯರ್ಸ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಮಂಗಳವಾರ ವರದಿ ತಿಳಿಸಿದೆ.
ಕಳೆದ ವಾರ ನಡೆದ ದೇಶಿಯ ಪಂದ್ಯದಲ್ಲಿ ಬರ್ಡ್ಗೆ ಗಾಯವಾಗಿತ್ತು. ಮಣಿಗಂಟು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ ಅವರಿಗೆ ಮೂರು ವಾರಗಳ ವಿಶ್ರಾಂತಿಯ ಅಗತ್ಯವಿದೆ ಎಂದು ಮೂಲಗಳು ತಿಳಿಸಿದೆ. ಬರ್ಡ್ ಕಳೆದ ಕ್ರಿಕೆಟ್ ಋತುವಿನಲ್ಲಿ ಶೆಫಲ್ಡ್ ಶೀಲ್ಡ್ ನಲ್ಲಿ 62 ವಿಕೆಟ್ಗಳನ್ನು ಪಡೆದಿದ್ದರು.
ಆಸ್ಟ್ರೇಲಿಯ ತಂಡ
ಸ್ಟೀವ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್, ಕ್ಯಾಮರೂನ್ ಬ್ಯಾಂಕ್ರಾಫ್ಟ್, ಪ್ಯಾಟ್ ಕಮಿನ್ಸ್, ಪೀಟರ್ ಹ್ಯಾಂಡ್ಸ್ಕ್ಯಾಂಬ್, ಜೋಶ್ ಹೆಝಲ್ವುಡ್, ಜಾನ್ ಹಾಲೆಂಡ್, ಉಸ್ಮಾನ್ ಖ್ವಾಝಾ, ಲಿಯೊನ್, ಮಿಚೆಲ್ ಮಾರ್ಶ್, ಶಾನ್ ಮಾರ್ಶ್, ಟಿಮ್ ಪೇನ್, ಜೆ. ರಿಚರ್ಡ್ಸನ್, ಚಡ್ ಸೇಯರ್ಸ್, ಮಿಚೆಲ್ ಸ್ಟಾರ್ಕ್.
Next Story