ಫೆಡ್ಕಪ್ ಪಂದ್ಯದಿಂದ ಉತ್ತೇಜನ : ಸಾನಿಯಾ
ಹೊಸದಿಲ್ಲಿ, ಫೆ.13: ಫೆಡ್ಕಪ್ನಲ್ಲಿ ಅಂಕಿತಾ ರೈನಾ ಅವರ ಸಾಧನೆ ತುಂಬ ಉತ್ತಮವಾಗಿತ್ತು. ಆದರೆ, ತಂಡವು ಮುಂದಿನ ಹಂತಕ್ಕೆ ತಲುಪಲು ಕಠಿಣ ಶ್ರಮ ವಹಿಸಬೇಕು ಎಂದು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಹೇಳಿದ್ದಾರೆ. ಕಳೆದ ವಾರ ಚೀನಾದ ತಪೈ ವಿರುದ್ಧ ನಡೆದ ಫೆಡ್ಕಪ್ ದೇಶಿಯ ಪಂದ್ಯದಲ್ಲಿ ಭಾರತವು ಏಶ್ಯಾ/ಓಶಿಯನ್ ಗ್ರೂಪ್ 1ರಲ್ಲಿ 2-0 ಅಂತರದಲ್ಲಿ ಗೆಲುವು ಸಾಧಿಸಿತ್ತು. ಆದರೆ, ಸ್ಪರ್ಧೆಯಲ್ಲಿ ಚೀನಾ ಹಾಗೂ ಕಝಕಿಸ್ತಾನ ವಿರುದ್ಧ ಸೋಲು ಅನುಭವಿಸಿದೆ.
Next Story