ನೀರವ್ ಮೋದಿ ಈಗ ಇರುವುದು ಇಲ್ಲಿ
ಸ್ವಿಝರ್ಲ್ಯಾಂಡ್ ನಲ್ಲಿ ಇಲ್ಲ ಈ ಸೆಲೆಬ್ರಿಟಿ ವಜ್ರೋದ್ಯಮಿ
ಹೊಸದಿಲ್ಲಿ, ಫೆ. 16: 11,300 ಕೋಟಿ ರೂ. ಬ್ಯಾಂಕ್ ಹಗರಣದ ಕೇಂದ್ರಬಿಂದು ನೀರವ್ ಮೋದಿ ನ್ಯೂಯಾರ್ಕ್ ನಲ್ಲಿ ಇದ್ದಾರೆ ಎಂದು ಎನ್.ಡಿ.ಟಿ.ವಿ. ವರದಿ ಮಾಡಿದೆ.
ನ್ಯೂಯಾರ್ಕ್ ನ ವಿಲಾಸಿ ಮನ್ ಹಾಟನ್ ಪ್ರದೇಶದಲ್ಲಿರುವ ಜೆ.ಡಬ್ಲ್ಯೂ. ಮ್ಯಾರಿಯೊಟ್ಸ್ ಮಾಲಕತ್ವದ ಎಸೆಕ್ಸ್ ಹೌಸ್ ನಲ್ಲಿ ಇರುವ ವಿಲಾಸಿ, ವಿಶಾಲ ಅಪಾರ್ಟ್ ಮೆಂಟ್ ಒಂದರಲ್ಲಿ ನೀರವ್ ಮೋದಿ ಹಾಗು ಅವರ ಕುಟುಂಬ ಉಳಿದುಕೊಂಡಿದೆ ಎಂದು ಎನ್.ಡಿ.ಟಿ.ವಿ. ವಿಶೇಷ ವರದಿ ಪ್ರಕಟಿಸಿದೆ.
ಜನವರಿ ಮೊದಲ ವಾರದಲ್ಲೇ ಕುಟುಂಬ ಸಮೇತ ದೇಶದಿಂದ ಪಲಾಯನ ಮಾಡಿರುವ ನೀರವ್ ಮೋದಿ ಸ್ವಿಝರ್ಲ್ಯಾಂಡ್ ನಲ್ಲಿ ಇದ್ದಾರೆ ಎಂದು ಈವರೆಗೆ ಊಹಿಸಲಾಗಿತ್ತು. ಬ್ಯಾಂಕ್ ಹಗರಣ ಪ್ರಕರಣದಲ್ಲಿ ನೀರವ್ ಮೋದಿ ಹಾಗು ಇತರ ನಾಲ್ವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿ, ಲುಕ್ ಔಟ್ ನೋಟೀಸ್ ಜಾರಿಗೊಳಿಸಿದೆ.
Next Story