ಮೀನುಗಾರಿಕೆ: ಶೂನ್ಯಬಡ್ಡಿ ದರದಲ್ಲಿ ಮಹಿಳಾ ಮೀನುಗಾರರಿಗೆ ಸಾಲ
ರಾಜ್ಯ ಬಜೆಟ್-2018
ಬೆಂಗಳೂರು, ಫೆ. 16: ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು ಮಹಿಳಾ ಮೀನುಗಾರರಿಗೆ 50 ಸಾವಿರ ರೂ.ಗಳವರೆಗೆ ಶೇ.2ರ ಬಡ್ಡಿ ದರದಲ್ಲಿ ವಾಣಿಜ್ಯ ಅಥವಾ ಗ್ರಾಮೀಣ ಪ್ರಾದೇಶಿಕ ಬ್ಯಾಂಕ್ಗಳಿಂದ ನೀಡುತ್ತಿರುವ ಸಾಲವನ್ನು ಈ ಸಾಲಿನಿಂದ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
* ಮೀನು ಮರಿಗಳನ್ನು ಹಿಡಿಯುವುದನ್ನು ತಪ್ಪಿಸಿ ಮತ್ಸ ಸಂಪತ್ತನ್ನು ರಕ್ಷಿಸಲು ಮೀನುಗಾರರಿಗೆ ಕಾಡ್ ಎಂಡ್ನಲ್ಲಿ 35 ಎಂಎಂ ಸ್ಟ್ವೇರ್ ಮೆಶ್ ಬಲೆಗಳನ್ನು ಉಚಿತವಾಗಿ ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ, 2500 ಟ್ರಾಲ್ ದೋಣಿಗಳಿಗೆ ತಲಾ 10 ಸಾವಿರ ರೂ.ಗಳಂತೆ 2.50 ಕೋಟಿ ರೂ.ಅನುದಾನವನ್ನು ಒದಗಿಸಲಾಗುವುದು.
* ಮೀನು ಮಾರಾಟಗಾರರು ಮಾರಾಟವಾಗದೇ ಉಳಿಯುವ ಮೀನನ್ನು ಮೀನು ಮಾರುಕಟ್ಟೆಗಳಲ್ಲಿ ಶೀಥಲೀಕೃತ ಘಟಕದಲ್ಲಿ ಸಂಗ್ರಹಿಸಲು ಮತ್ಸ ಜೋಪಾಸನೆ ಯೋಜನೆಯಡಿ ರಾಜ್ಯದಲ್ಲಿ 10 ಶಿಥಲೀಕೃತ ಘಟಕಗಳನ್ನು ತಲಾ 10 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
* ಉತ್ತರ ಕನ್ನಡ ಜಿಲ್ಲೆ, ಮುರುಡೇಶ್ವರದಲ್ಲಿ ಸುಮಾರು 165 ಯಾಂತ್ರೀಕತ ಮತ್ತು ನಾಡದೋಣಿಗಳ ಸುರಕ್ಷಿತ ಇಳಿದಾಣಕ್ಕೆ ಹೊರ ಬಂದರು ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಪೂರ್ವಭಾವಿ ಅಧ್ಯಯನವನ್ನು ಕೈಗೊಳ್ಳಲು 1 ಕೋಟಿ ರೂ.ಗಳನ್ನು ಒದಗಿಸಲಾಗಿದೆ.
* 2018-19ನೆ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಗೆ ಒಟ್ಟಾರೆಯಾಗಿ 252 ಕೋಟಿ ರೂ.ಗಳನ್ನು ಒದಗಿಸಲಾಗಿದೆ.