ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿ 23 ಲಕ್ಷ ರೂ. ಗೆದ್ದದ್ದು ಹೇಗೆ?
ಆಕ್ಲೆಂಡ್, ಫೆ.16: ಆಸ್ಟ್ರೇಲಿಯ ಮತ್ತು ನ್ಯೂಝಿಲೆಂಡ್ ತಂಡಗಳ ನಡುವಿನ ತ್ರಿಕೋನ ಸರಣಿಯ ಪಂದ್ಯದಲ್ಲಿ ಶುಕ್ರವಾರ ರಾತ್ರಿ ವಿವಿ ವಿದ್ಯಾರ್ಥಿಯೊಬ್ಬ ರಾಸ್ ಟೇಲರ್ ಅವರು ಸಿಕ್ಸರ್ಗೆ ಅಟ್ಟಿದ ಚೆಂಡನ್ನು ಕ್ಯಾಚ್ ತೆಗೆದುಕೊಂಡು 23 ಲಕ್ಷ ರೂ. ಮೊತ್ತದ ಬಹುಮಾನವನ್ನು ಜೇಬಿಗಿಳಿಸಿದ್ದಾನೆ.
ಆಸ್ಟ್ರೇಲಿಯದ ಆ್ಯಂಡ್ರೊ ಟೈ ಅವರ ಎಸೆತದಲ್ಲಿ ನ್ಯೂಝಿಲೆಂಡ್ನ ರಾಸ್ ಟೇಲರ್ ಚೆಂಡನ್ನು ಸ್ಕ್ವಾರ್ ಲೆಗ್ ಬೌಂಡರಿ ಮೂಲಕ ಸಿಕ್ಸರ್ಗೆ ಅಟ್ಟಿದರು. ಆಗ ಪ್ರೇಕ್ಷಕರ ಗ್ಯಾಲರಿಯತ್ತ ಬರುತ್ತಿದ್ದ ಚೆಂಡನ್ನು ವಿದ್ಯಾರ್ಥಿ ಮಿಚ್ ಗ್ರೀಮ್ಸ್ಟೋನ್ ಎಡಗೈಯಲ್ಲಿ ಕ್ಯಾಚ್ ತೆಗೆದುಕೊಂಡರು.
ಗ್ರೀಮ್ಸ್ಟೋನ್ ಕ್ಯಾಚ್ ತೆಗೆದುಕೊಳ್ಳುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಕ್ರಿಕೆಟ್ ಅಭಿಮಾನಿಗಳು ಗ್ರೀಮ್ ಸ್ಟೋನ್ ಅವರನ್ನು ಅಭಿನಂದಿಸಿದರು. ಯಾಕೆಂದರೆ ಗ್ರೀಮ್ ಸ್ಟೋನ್ ಈ ಕ್ಯಾಚ್ನೊಂದಿಗೆ ಪ್ರೇಕ್ಷಕರ ಗ್ಯಾಲರಿಯತ್ತ ಬರುವ ಕ್ಯಾಚ್ನ್ನು ತೆಗೆದುಕೊಳ್ಳುವವರಿಗೆ ನೀಡಲಾಗುವ ಬಹುಮಾನ ಆತನಿಗೆ ಒಲಿದಿತ್ತು.
ಗ್ರೀಮ್ ಸ್ಟೋನ್ ಎರಡನೇ ಬಾರಿ ಬಹುಮಾನ ಗೆದ್ದುಕೊಂಡಿದ್ದಾನೆ, ಕಳೆದ ತಿಂಗಳು ಡುನೆಡಿನ್ನಲ್ಲಿ ನ್ಯೂಝಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದಲ್ಲಿ ಕ್ಯಾಚ್ ತೆಗೆದುಕೊಂಡು 23 ಲಕ್ಷ ರೂ. ಮೊತ್ತದ ಬಹುಮಾನ ಪಡೆದಿದ್ದನು.