ಭಾಂಬ್ರಿ ಫೈನಲ್ ಗೆ, ಥಾಂಪ್ಸನ್ ಎದುರಾಳಿ
ಚೆನ್ನೈ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿ
ಚೆನ್ನೈ, ಫೆ.16: ಭಾರತದ ಯೂಕಿ ಭಾಂಬ್ರಿ ಚೆನ್ನೈ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಮೆಂಟ್ನಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದ್ದು, ಆಸ್ಟ್ರೇಲಿಯ ಜೋರ್ಡನ್ ಥಾಂಪ್ಸನ್ರನ್ನು ಎದುರಿಸಲಿದ್ದಾರೆ.
ಇಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ನ ಸೆಮಿ ಫೈನಲ್ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಭಾಂಬ್ರಿ 3ನೇ ಶ್ರೇಯಾಂಕದ ಕೊರಿಯಾದ ಡಕ್ಹೀ ಲೀ ಅವರನ್ನು ಒಂದು ಗಂಟೆ, 25 ನಿಮಿಷಗಳ ಹೋರಾಟದಲ್ಲಿ 7-5, 6-2 ಅಂತರದಿಂದ ಮಣಿಸಿದರು.
ಮತ್ತೊಂದು ಸಿಂಗಲ್ಸ್ ಸೆಮಿಫೈನಲ್ನಲ್ಲಿ ಥಾಂಪ್ಸನ್ ಶ್ರೇಯಾಂಕರಹಿತ ಸ್ಪೇನ್ ಆಟಗಾರ ಪೆಟ್ರೊ ಮಾರ್ಟಿನೆಝ್ರನ್ನು 6-1, 7-6 ನೇರ ಸೆಟ್ಗಳಿಂದ ಸೋಲಿಸಿದರು.
ಲೀ ವಿರುದ್ಧ ಜಯ ಸಾಧಿಸುವ ಮೂಲಕ ಭಾಂಬ್ರಿ ಹೆಡ್-ಟು-ಹೆಡ್ ದಾಖಲೆಯನ್ನು 2-0ಗೆ ವಿಸ್ತರಿಸಿಕೊಂಡರು. ಅಗ್ರ-100ರಲ್ಲಿ ವಾಪಸಾಗುವ ಅವಕಾಶವನ್ನು ಹೆಚ್ಚಿಸಿಕೊಂಡರು.
Next Story