ಮೈಸೂರು: ಚುನಾವಣಾ ವೀಕ್ಷಕ ಡಾ.ಪಿ.ಸಿ.ಜಾಫರ್ ಭೇಟಿ; ಅಧಿಕಾರಿಗಳಿಂದ ಮಾಹಿತಿ
ಮೈಸೂರು,ಫೆ.17: ಮತದಾರರ ಪಟ್ಟಿಯ ಚುನಾವಣಾ ವೀಕ್ಷಕರಾದ ಹಿರಿಯ ಐ.ಎ.ಎಸ್. ಅಧಿಕಾರಿ ಡಾ. ಪಿ.ಸಿ. ಜಾಫರ್ ರವರು ಶನಿವಾರ ಮೈಸೂರಿಗೆ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ರಾಷ್ಟ್ರೀಯ ಮತದಾರರ ದಿನಾಚರಣೆ ದಿನದಂದು ಕೈಗೊಂಡ ಕ್ರಮಗಳ ಬಗ್ಗೆ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆ, ತಿದ್ದುಪಡಿ, ಮುಂತಾದವುಗಳ ಬಗ್ಗೆ ಜಿಲ್ಲಾಡಳಿತ ವತಿಯಿಂದ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ರಂದೀಪ್ ಡಿ. ರವರು ಮಾಹಿತಿ ಜಾಫರ್ ಅವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹುಣಸೂರು ಉಪವಿಭಾಗಾಧಿಕಾರಿ ನಿತೀಶ್ ಅವರು ಉಪಸ್ಥಿತರಿದ್ದರು.
Next Story