‘ಮ್ಯಾಸ್ ಡಿಲವರಿ ಆಫ್ ನ್ಯೂ ಸ್ವಿಪ್ಟ್’ ಕಾರ್ಯಕ್ರಮ
ಮಂಗಳೂರು, ಫೆ. 17: ಮಾರುತಿ ಸುಝುಕಿ ಇಂಡಿಯಾ ಪ್ರೈ. ಲಿ.ನ ವತಿಯಿಂದ ಹಾಗೂ ಮಾಂಡವಿ ಮೋಟರ್ಸ್ ಪ್ರೈ. ಲಿ. ಮತ್ತು ಭಾರತ್ ಅಟೊ ಕಾರ್ ಪ್ರೈ.ಲಿ. ಸಹಯೋಗದಲ್ಲಿ ‘ಮ್ಯಾಸ್ ಡಿಲವರಿ ಆಫ್ ನ್ಯೂ ಸ್ವಿಪ್ಟ್’ ಕಾರ್ಯಕ್ರಮವು ಶನಿವಾರ ನಗರದ ಡೊಗರಕೇರಿಯ ಸುಧೀಂದ್ರ ಆಡಿಟೋರಿಯಂನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹೊಸ ಸ್ವಿಫ್ಟ್ ಕಾರುಗಳನ್ನು ಬುಕ್ ಮಾಡಿದ್ದ ಗ್ರಾಹಕರಲ್ಲಿ ಸುಮಾರು 70 ಮಂದಿಗೆ ಕಾರಿನ ಕೀಗಳನ್ನು ಹಸ್ತಾಂತರಿಸಲಾಯಿತು.
ಮಾರುತಿ ಸುಝುಕಿಯ ಸೇಲ್ಸ್ ಮ್ಯಾನೇಜರ್ ಪರಾಸ್, ಮಾಂಡವಿ ಮೋಟರ್ಸ್ನ ನಿರ್ದೇಶಕ ಆರೂರು ಸಂಜಯ್ ರಾವ್, ಭಾರತ್ ಆಟೊ ಕಾರ್ಸ್ನ ಎಂ.ಡಿ. ಸುಧೀರ್ ಎಂ. ಪೈ, ಸೀನಿಯರ್ ಸೇಲ್ಸ್ ಮ್ಯಾನೇಜರ್ ಡೆನಿಸ್ ಗೊನ್ಸಾಲ್ವಸ್ ಮತ್ತಿತರರು ಉಪಸ್ಥಿತರಿದ್ದರು.
Next Story