ಭಾರತೀಯ ನೌಕಾಪಡೆಗೆ 2 ಸಬ್ಮರೀನ್ ರಕ್ಷಕ ನೌಕೆ
ಲಂಡನ್, ಫೆ. 17: ಸಬ್ಮರೀನ್ಗಳನ್ನು ರಕ್ಷಿಸುವ ಉದ್ದೇಶದ 2 ತೃತೀಯ ತಲೆಮಾರಿನ ಆಳ ಶೋಧ ಮತ್ತು ರಕ್ಷಣಾ ವಾಹನ (ಡಿಎಸ್ಆರ್ವಿ)ಗಳನ್ನು ಸ್ಕಾಟ್ಲ್ಯಾಂಡ್ನ ಕಂಪೆನಿಯೊಂದು ಭಾರತೀಯ ನೌಕಾಪಡೆಗೆ ಜೂನ್ ವೇಳೆಗೆ ಪೂರೈಸಲಿದೆ.
ಈ ಎರಡು ಸಬ್ಮರೀನ್ ರಕ್ಷಕ ವಾಹನಗಳನ್ನು ಪೂರೈಸುವುದಕ್ಕಾಗಿ 2016ರ ಮಾರ್ಚ್ನಲ್ಲಿ ಜೆಎಫ್ಡಿ ಕಂಪೆನಿಯೊಂದಿಗೆ 193 ಮಿಲಿಯ ಪೌಂಡ್ (ಸುಮಾರು 1,743 ಕೋಟಿ ರೂಪಾಯಿ) ಒಪ್ಪಂದ ಮಾಡಿಕೊಳ್ಳಲಾಗಿತ್ತು.
Next Story