ಚೆನ್ನೈ ಓಪನ್: ಫೈನಲ್ನಲ್ಲಿ ಮುಗ್ಗರಿಸಿದ ಭಾಂಬ್ರಿ
ಚೆನ್ನೈ, ಫೆ.17: ಭಾರತದ ಟೆನಿಸ್ ಆಟಗಾರ ಯೂಕಿ ಭಾಂಬ್ರಿ ಚೆನ್ನೈ ಓಪನ್ ಎಟಿಪಿ ಚಾಲೆಂಜರ್ ಫೈನಲ್ನಲ್ಲಿ ಆಸ್ಟ್ರೇಲಿಯದ ಜೋರ್ಡನ್ ಥಾಮ್ಸನ್ ವಿರುದ್ಧ ಶರಣಾಗಿ ಪ್ರಶಸ್ತಿ ವಂಚಿತರಾದರು. ಶನಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಭಾಂಬ್ರಿ ಅವರು ಥಾಮ್ಸನ್ ವಿರುದ್ಧ 5-7, 6-3, 5-7 ಸೆಟ್ಗಳಿಂದ ಸೋತು ರನ್ನರ್ಸ್-ಅಪ್ಗೆ ತೃಪ್ತಿಪಟ್ಟರು. ಮೊದಲ ಸೆಟ್ನಲ್ಲಿ ಉಭಯ ಆಟಗಾರರ ನಡುವೆ ತೀವ್ರ ಪೈಪೋಟಿ ಕಂಡುಬಂದಿದ್ದು, ಥಾಮ್ಸನ್ ಮೊದಲ ಸೆಟ್ನ್ನು 7-5 ರಿಂದ ಗೆದ್ದುಕೊಂಡರು. ಎರಡನೇ ಸೆಟ್ನ್ನು 6-3 ರಿಂದ ಜಯಿಸಿದ ಭಾಂಬ್ರಿ ತಿರುಗೇಟು ನೀಡಿದರು. 3ನೇ ಸೆಟ್ನಲ್ಲಿ ಭಾಂಬ್ರಿ ಪೈಪೋಟಿ ನೀಡಿದರೂ 5-7 ರಿಂದ ಸೋತರು.
Next Story