20 ವರ್ಷಗಳ ಬಳಿಕ ಒಲಿಂಪಿಕ್ಸ್ ಪದಕ ಜಯಿಸಿದ ಅಮೆರಿಕ
ನ್ಯೂಯಾರ್ಕ್,ಫೆ.22: ಪಿಯೊಂಗ್ಚಾಂಗ್ ಚಳಿಗಾಲದ ಒಲಿಂಪಿಕ್ ಗೇಮ್ಸ್ನಲ್ಲಿ ಹಾಲಿ ಚಾಂಪಿಯನ್ ಕೆನಡಾವನ್ನು ಪೆನಾಲ್ಟಿ ಶೂಟೌಟ್ನಲ್ಲಿ 3-2 ಅಂತರದಿಂದ ಮಣಿಸಿದ ಅಮೆರಿಕದ ಮಹಿಳೆಯರ ಐಸ್ ಹಾಕಿ ತಂಡ 20 ವರ್ಷಗಳ ಬಳಿಕ ಚಿನ್ನ ಗೆದ್ದುಕೊಂಡಿದೆ. ಸತತ ನಾಲ್ಕು ಬಾರಿಯ ಚಾಂಪಿಯನ್ ಕೆನಡಾವನ್ನು ರೋಚಕವಾಗಿ ಸದೆ ಬಡಿದಿರುವ ಅಮೆರಿಕ 1998ರ ಬಳಿಕ ಮೊದಲ ಬಾರಿ ಒಲಿಂಪಿಕ್ಸ್ ಚಾಂಪಿಯನ್ಪಟ್ಟಕ್ಕೇರಿದೆ.
ಉಭಯ ತಂಡಗಳು 2-2 ರಿಂದ ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
Next Story