ಉತ್ತರ ಪ್ರದೇಶ: ಮಾರುಕಟ್ಟೆಯಿಂದ ಮನೆಗೆ ಬರುತ್ತಿದ್ದ ಬಾಲಕಿಯ ಸಜೀವದಹನ
ಉನ್ನಾವೋ, ಫೆ.23: ಮಾರುಕಟ್ಟೆಯಿಂದ ತರಕಾರಿ ಖರೀದಿಸಿ ಮನೆಗೆ ಹಿಂದಿರುಗುತ್ತಿದ್ದ ಬಾಲಕಿಯೊಬ್ಬಳನ್ನು ಸಜೀವ ದಹನಗೈದ ಘಟನೆಯೊಂದು ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ.
ಸಂಜೆ 7 ಗಂಟೆ ಸುಮಾರಿಗೆ ಬಾಲಕಿ ಮನೆಯಿಂದ ಹೊರಟಿದ್ದಳು ಎನ್ನಲಾಗಿದೆ. ಮನೆ ಹಾಗು ಮಾರುಕಟ್ಟೆಯ ನಡುವೆ ಇರುವ ಬಾರಾ ಸಾಗ್ವರ್ ಎಂಬಲ್ಲಿ ಬಾಲಕಿ ಬೆಂಕಿಯಲ್ಲಿ ಸಿಲುಕಿ ನರಳುತ್ತಿದ್ದಳು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಇದೇ ಸ್ಥಳದಲ್ಲಿ ಬಾಲಕಿಯ ಮೃತದೇಹದ ಸಮೀಪ ಪೆಟ್ರೋಲ್ ತುಂಬಿದ್ದ ಕಂಟೇನರ್ ಹಾಗು ಬೆಂಕಿಪೆಟ್ಟಿಗೆ ಸಿಕ್ಕಿವೆ.
ಅಪರಿಚಿತರು ತಮ್ಮ ಪುತ್ರಿಯನ್ನು ಜೀವಂತ ದಹಿಸಿದ್ದಾರೆ ಎಂದು ಬಾಲಕಿಯ ತಾಯಿ ಹೇಳಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story