ಸ್ಯಾಂಡಲ್ವುಡ್ಗೆ ಬರಲಿದ್ದಾರೆ ಪ್ರಿಯಾ ವಾರಿಯರ್
‘ಒರು ಅಡಾರ್ ಲವ್’ ಮಲಯಾಳಂ ಚಿತ್ರದ ಟೀಸರ್ ಹಾಡಿನಲ್ಲಿ ಕಣ್ಣ ಹುಬ್ಬುಗಳನ್ನು ಕುಣಿಸುತ್ತಲೇ, ದೇಶಾದ್ಯಂತ ಚಿತ್ರ ಪ್ರೇಮಿಗಳ ಮನೆಮಾತಾಗಿರುವ ಪ್ರಿಯಾ ವಾರಿಯರ್ ಸ್ಯಾಂಡಲ್ವುಡ್ಗೆ ಬರುತ್ತಿದ್ದಾರೆ. ‘ಯೋಗಿ ಲವ್ಸ್ ಸುಪ್ರಿಯಾ’ ಎಂದು ಹೆಸರಿಡಲಾದ ಕನ್ನಡ ಚಿತ್ರದಲ್ಲಿ ನಟಿಸಲು ಪ್ರಿಯಾ ಓ.ಕೆ. ಅಂದಿದ್ದಾರೆ. ಅಂದಹಾಗೆ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತರುತ್ತಿರುವವರು ನಿರ್ದೇಶಕ ಯೋಗಿ. ಹಲವಾರು ಚಿತ್ರಗಳಲ್ಲಿ ವಿವಿಧ ವಿಭಾಗಗಳಲ್ಲಿ ದುಡಿದ ಅನುಭವವಿರುವ ಯೋಗಿ ಅವರು ಯೋಗಿ ಲವ್ಸ್ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ನಾಯಕನಾಗಿಯೂ ನಟಿಸುತ್ತಿದ್ದಾರೆ. ಈಗ ಭಾರೀ ವೈರಲ್ ಆಗಿರುವ ‘ಒರು ಅಡಾರ್ ಲವ್’ ಟೀಸರ್ನಲ್ಲಿ ಪ್ರಿಯಾರ ಕಣ್ಣೋಟದ ಅಭಿನಯವನ್ನು ಮೆಚ್ಚಿ, ಆಕೆಯನ್ನು ತನ್ನ ಚಿತ್ರಕ್ಕೆ ನಾಯಕಿ ಮಾಡಬೇಕೆಂದು ಯೋಗಿ ನಿರ್ಧರಿಸಿದ್ದರಂತೆ. ‘ಒರು ಅಡಾರ್ ಲವ್’ ಚಿತ್ರತಂಡದ ಮೂಲಕ ಪ್ರಿಯಾ ಅವರನ್ನು ಯೋಗಿ ಸಂಪರ್ಕಿಸಿದ್ದರು. ಯೋಗಿ ಲವ್ಸ್ ಸುಪ್ರಿಯಾ ಚಿತ್ರಕಥೆಯನ್ನು ಕೇಳಿದ ಪ್ರಿಯಾ ವಾರಿಯರ್, ಆ ಚಿತ್ರದಲ್ಲಿ ನಟಿಸಲು ಓ.ಕೆ. ಅಂದಿದ್ದಾರೆಂದು ಯೋಗಿ ಹೇಳಿದ್ದಾರೆ.