ಅಫ್ಘಾನ್: ಸರಣಿ ದಾಳಿಗೆ 23 ಬಲಿ
ಕಾಬೂಲ್,ಫೆ.24: ಅಫ್ಘಾನಿಸ್ತಾನದಲ್ಲಿ ಶನಿವಾರ ನಡೆದ ಸರಣಿ ಆತ್ಮಹತ್ಯಾ ಬಾಂಬ್ ಸ್ಫೋಟ ಹಾಗೂ ಬಂಡುಕೋರರ ದಾಳಿಗಳಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆ.
ಪಶ್ಚಿಮ ಪ್ರಾಂತವಾದ ಫಾರಹ್ನಲ್ಲಿ ಅಫ್ಘಾನ್ ಸೇನಾ ನೆಲೆಯ ಮೇಲೆ ದಾಳಿ ನಡೆಸಿದ ತಾಲಿಬಾನ್ ಬಂಡುಕೋರರು ಕನಿಷ್ಠ 18 ಮಂದಿ ಯೋಧರನ್ನು ಹತ್ಯೆಗೈದಿದ್ದಾರೆ.
ಅಪ್ಘಾನ್ ರಾಜಧಾನಿ ಕಾಬೂಲ್ನಲ್ಲಿ ರಾಜತಾಂತ್ರಿಕ ಪ್ರದೇಶವೊಂದರ ಸಮೀಪ ಬೆಳಗ್ಗೆ 8:30ರ ವೇಳೆಗೆ ಆತ್ಮಹತ್ಯಾ ಬಾಂಬರ್ ಒಬ್ಬಾತ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದು, ಕನಿಷ್ಠ ಮೂರು ಮಂದಿ ನಾಗರಿಕರು ಸಾವನ್ನಪ್ಪಿದ್ದು ಇತರ ಐವರು ಗಾಯಗೊಂಡಿದ್ದಾರೆ. ಈ ಎರಡೂ ದಾಳಿಗಳ ಹೊಣೆಯನ್ನು ತಾಲಿಬಾನ್ ಹೊತ್ತುಕೊಂಡಿದೆ.
Next Story