ಬಿಜೆಪಿ ನಾಯಕನಿಂದ ವ್ಯಕ್ತಿಗೆ ಕಿರುಕುಳ: ವೀಡಿಯೊ ವೈರಲ್
ತಂದೆಗಾದ ಅವಮಾನ ಸಹಿಸದ ಯುವತಿ ಆತ್ಮಹತ್ಯೆಗೆ ಯತ್ನ
ಜಬಲ್ಪುರ, ಫೆ. 25: ತನ್ನ ತಂದೆ ಬೆನ್ನಿನ ಮೇಲೆ ನೀರಿನ ಬಾಟಲಿ ಇರಿಸಿಕೊಂಡು ಬಗ್ಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಮಧ್ಯಪ್ರದೇಶದ 20 ವರ್ಷದ ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ನಡೆದಿದೆ.
ಜಬಲ್ಪುರದ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥ ವ್ಯಕ್ತಿಯೊಬ್ಬರು ನೀರಿನ ಬಾಟಲಿಯನ್ನು ಬೆನ್ನಿನ ಮೇಲಿರಿಸಿ ಬಾಗುವಂತೆ ಮಾಡಿದ್ದರು ಹಾಗೂ ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ವ್ಯಾಟ್ಸ್ ಆ್ಯಪ್ನಲ್ಲಿ ಹಂಚಿದ್ದರು.
ಹಣಕಾಸಿನ ವಿವಾದಕ್ಕೆ ಸಂಬಂಧಿಸಿ ಮುಹಮ್ಮದ್ ಶಫೀಕ್ ಆಲಿಯಾಸ್ ಹೀರಾ ವ್ಯಕ್ತಿಯೊಬ್ಬರಿಗೆ ಕಿರುಕುಳ ನೀಡುತ್ತಿರುವುದು ಹಾಗೂ ಅವರ ವಿರುದ್ಧ ಮಾತನಾಡಿರುವುದಕ್ಕೆ ಬೆದರಿಕೆ ಒಡ್ಡುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಈ ಘಟನೆ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಗುಣಮುಖರಾಗಿದ್ದಾರೆ. ‘‘ಕಾಲೇಜಿನಲ್ಲಿ ಈ ದೃಶ್ಯ ನೋಡಿ ಆಕೆ ಆತ್ಮಹತ್ಯೆಗೆ ಯತ್ನಿಸಿದಳು’’ ಎಂದು ಯುವತಿಯ ತಾಯಿ ಹೇಳಿದ್ದಾರೆ.
Next Story