varthabharthi

ಗಲ್ಫ್ ಸುದ್ದಿ

ಭ್ರಷ್ಟಾಚಾರ ನಿಗ್ರಹಕ್ಕೆ ಸೌದಿ ದೊರೆಯಿಂದ ಇನ್ನಷ್ಟು ಉಪಕ್ರಮ

ವಾರ್ತಾ ಭಾರತಿ : 12 Mar, 2018

ರಿಯಾದ್, ಮಾ. 12: ಭ್ರಷ್ಟಾಚಾರವನ್ನು ನಿಗ್ರಹಿಸುವುದಕ್ಕಾಗಿ ಅಟಾರ್ನಿ ಜನರಲ್ ಕಚೇರಿಯ ಅಡಿಯಲ್ಲಿ ಕಾನೂನು ಇಲಾಖೆಗಳನ್ನು ರಚಿಸುವ ಪ್ರಸ್ತಾವಕ್ಕೆ ಸೌದಿ ಅರೇಬಿಯದ ದೊರೆ ಸಲ್ಮಾನ್ ಅಂಗೀಕಾರ ನೀಡಿದ್ದಾರೆ.

ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಮೊಕದ್ದಮೆಗಳಲ್ಲಿ ಈ ಇಲಾಖೆಗಳು ತನಿಖೆ ಮತ್ತು ವಿಚಾರಣೆಗಳನ್ನು ನಡೆಸುತ್ತವೆ.

ದೊರೆ ಮತ್ತು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ದೃಢವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಅಟಾರ್ನಿ ಜನರಲ್ ಶೇಖ್ ಸೌದ್ ಬಿನ್ ಅಬ್ದುಲ್ಲಾ ಅಲ್-ಮುಅಜಬ್ ಹೇಳಿದರು.

ಈ ಸಂಬಂಧ ಸೊರೆ ಸಲ್ಮಾನ್ ರವಿವಾರ ಆದೇಶವೊಂದನ್ನು ಹೊರಡಿಸಿದ್ದಾರೆ ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)