varthabharthi

ನಿಧನ

ಎಂ.ಜೋಷೆಪ್

ವಾರ್ತಾ ಭಾರತಿ : 12 Mar, 2018

ಕೊಳ್ಳೇಗಾಲ.ಮಾ.12: ನ್ಯೂ ಅಪೋಸ್ತಲಿನ್ ಚರ್ಚ್‍ನ ಧರ್ಮಗುರು ಎಂ.ಜೋಷೆಪ್ (64) ರವರು ಹೃದಯ ಖಾಯಿಲೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಜೋಷೆಪ್‍ರವರು ಕಳೆದ ಮಾರ್ಚ 8 ರಂದು ಗುರುವಾರ ಹೃದಯ ಕಾಯಿಲೆಗೆ ಸಂಬಂಧಿಸಿದಂತೆ ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ದಾಖಲಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾಗಿದ್ದಾರೆ.

ಉತ್ತಮ ಕ್ರೀಡಾಪಟು ಮತ್ತು ಕ್ರೈಸ್ತ ಧರ್ಮದ ಧರ್ಮಗುರು ಆಗಿರುವ ಮೃತ ಎಂ.ಜೋಷೆಪ್ ರವರಿಗೆ ಮೂವರು ಗಂಡು ಮಕ್ಕಳು ಒಂದು ಹೆಣ್ಣು ಮಗು ಇದ್ದು,  ಕುಂಟುಂಬ ವರ್ಗದವರನ್ನು ಅಗಲಿದ್ದಾರೆ.

ಸೋಮವಾರ ನಗರದ ಕ್ರೈಸ್ತ ರುಧ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮೃತರ ಪುತ್ರ ಆನಂದ್ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)