varthabharthi

ವಿಶೇಷ-ವರದಿಗಳು

ಪ್ರಪಂಚೋದ್ಯ

ವಿಷಕಾರಿ ಫುಗು ಮೀನಿನ ಮಾಂಸ ಮತ್ತು ಪೊಲೀಸರ ತುರ್ತು ಸಂದೇಶ!

ವಾರ್ತಾ ಭಾರತಿ : 13 Mar, 2018

ಜಪಾನಿನ ಫುಗು ಮೀನಿನ ಮಾಂಸ ಎಷ್ಟು ರುಚಿಕರವೋ ಅಷ್ಟೇ ಅಪಾಯಕಾರಿ ಕೂಡಾ. ಯಾಕೆಂದರೆ ಅದರ ಯಕೃತ್ (ಲಿವರ್) ಅತ್ಯಂತ ವಿಷಕಾರಿಯಾಗಿದ್ದು, ಯಾರಾದರೂ ಅಪ್ಪಿತಪ್ಪಿ ಸೇವಿಸಿದಲ್ಲಿ ಆತ ಸಾವನ್ನಪ್ಪುವುದು ಖಂಡಿತ. ಹೀಗಾಗಿ ಫುಗುಮೀನನ್ನು ಮಾರಾಟಕ್ಕಿಡುವ ಮುನ್ನ ಅತ್ಯಂತ ಜಾಗರೂಕತೆಯಿಂದ ಅದರ ಯಕೃತ್ತನ್ನು ತೆಗೆದುಹಾಕಲಾಗುತ್ತದೆ.

ಆದರೆ, ಇತ್ತೀಚೆಗೆ ಮಧ್ಯ ಜಪಾನ್‌ನ ನಗರವಾದ ಗಾಮಾಗೊರಿಯಲ್ಲಿ ಫುಗು ಮೀನಿನ ಮಾಂಸ ತುಂಬಿದ ಪೆಟ್ಟಿಗೆಯಲ್ಲಿ ಅದರ ಮಾರಣಾಂತಿಕ ಯಕೃತ್ ಪತ್ತೆಯಾದ ಹಿನ್ನೆಲೆಯಲ್ಲಿ ಗಾಬರಿಬಿದ್ದ ಪೊಲೀಸರು ಅದರ ಜೊತೆಗೆ ಮಾರುಕಟ್ಟೆಗೆ ಪೂರೈಕೆ ಮಾಡಲಾಗಿದ್ದ ಇತರ ನಾಲ್ಕು ಫುಗು ಮಾಂಸದ ಪೆಟ್ಟಿಗೆಗಳನ್ನು ವಾಪಸ್ ಪಡೆಯಲು ತುರ್ತು ಧ್ವನಿವರ್ಧಕ (ಲೌಡ್‌ಸ್ಪೀಕರ್) ವ್ಯವಸ್ಥೆಯ ಮೊರೆ ಹೋಗಬೇಕಾಯಿತು.
ನಡೆದ ವಿಷಯವಿಷ್ಟೇ. ಗೊಮಾಗೊರಿ ಸೂಪರ್‌ಮಾರ್ಕೆಟ್‌ನಲ್ಲಿ ಫುಗು ಮೀನಿನ ಮಾಂಸದ ಐದು ಪ್ಯಾಕೆಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಆದರೆ ಒಂದು ಪ್ಯಾಕೆಟ್ ಫುಗುಮೀನಿನ ಮಾಂಸ ಖರೀದಿಸಿದ ಗ್ರಾಹಕನೊಬ್ಬ ಅದರಲ್ಲಿ ಯಕೃತ್ ಇರುವುದನ್ನು ಕಂಡ ಕೂಡಲೇ ಆರೋಗ್ಯ ಕೇಂದ್ರಕ್ಕೆ ಅದನ್ನು ತಂದಿದ್ದ. ಈ ಯಕೃತ್‌ನಲ್ಲಿರುವ ವಿಷವು, ಇತರ ಪೊಟ್ಟಣಗಳಲ್ಲಿರುವ ಪುಗುಮೀನಿನ ಮಾಂಸವನ್ನು ಸೋಂಕಿರುವ ಸಾಧ್ಯತೆಯಿತ್ತು. ಆದರೆ ಫುಗುಮೀನಿನ ಮಾಂಸದ ಇತರ ಪ್ಯಾಕೆಟ್‌ಗಳನ್ನು ಾರು ಖರೀದಿಸಿದ್ದರೆಂಬ ಮಾಹಿತಿಯಿರಲಿಲ್ಲ.
 ಹೀಗಾಗಿ ಜಾಗೃತರಾದ ಪೊಲೀಸರು ಗ್ರಾಹಕರಿಂದ ಅವುಗಳನ್ನು ವಾಪಸ್ ಪಡೆಯಲು ಕೂಡಲೇ ನಗರವಿಡೀ ತುರ್ತು ಧ್ವನಿವರ್ಧಕದ ಮೂಲಕ ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದರು. ಸಾಮಾನ್ಯವಾಗಿ ತುರ್ತು ಧ್ವನಿವರ್ಧಕಗಳನ್ನು ಭೂಕಂಪ ಅಥವಾ ಇತರ ವಿಕೋಪಗಳ ಸಂದರ್ಭಗಳಲ್ಲಿ ಮಾತ್ರವೇ ಬಳಸಲಾಗುತ್ತದೆ. ಆದಾಗ್ಯೂ, ಕೇವಲ ಎರಡು ಪ್ಯಾಕೆಟ್‌ಗಳಷ್ಟೇ ವಾಪಸ್ ಬಂದಿವೆಯೆನ್ನಲಾಗಿದೆ.
ಆದರೆ ಆರೋಗ್ಯ ಸಚಿವಾಲಯವು, ವಿಷಕಾರಿ ಯಕೃತ್ ಇದ್ದ ಪ್ಯಾಕೇಟ್ ಮಾರಾಟವಾದ ಮಳಿಗೆಯಲ್ಲಿ ಫುಗು ಮೀನಿನ ಮಾಂಸದ ಮಾರಾಟವನ್ನು ಸ್ಯ ನಿಷೇಧಿಸಿದೆಯೆಂದು ಓಹಾಸಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)