varthabharthi

ರಾಷ್ಟ್ರೀಯ

ನೀರವ್ ಮೋದಿ ಪ್ರಕರಣ

ಮತ್ತೆ 942 ಕೋಟಿ ರೂ. ಮೊತ್ತದ ವಂಚನೆ ಬಯಲು ಮಾಡಿದ ಪಿಎನ್‌ಬಿ

ವಾರ್ತಾ ಭಾರತಿ : 13 Mar, 2018

ಮುಂಬೈ, ಮಾ.13: ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಮಾಡಿರುವ ವಂಚನೆಯ ಮೊತ್ತದಲ್ಲಿ ಏರಿಕೆಯಾಗುತ್ತಲೇ ಇದ್ದು ಮಂಗಳವಾರದಂದು ಈ ಮೊತ್ತಕ್ಕೆ ಬ್ಯಾಂಕ್ ಹೆಚ್ಚುವರಿ 942 ಕೋಟಿ ರೂ. ಸೇರಿಸಿದೆ. ಮಂಗಳವಾರದಂದು ನ್ಯಾಯಾಲಯದಲ್ಲಿ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಮೆಹುಲ್ ಚೋಕ್ಸಿ ಮಾಲಕತ್ವದ ಗೀತಾಂಜಲಿ ಸಮೂಹ ಸಂಸ್ಥೆಯು ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 7,080 ಕೋಟಿ ರೂ. ವಂಚಿಸಿರುವುದಾಗಿ ತಿಳಿಸಿದ್ದಾರೆ. ಇದಕ್ಕೂ ಮೊದಲು ಪಿಎನ್‌ಬಿಯು ಗೀತಾಂಜಲಿ ಸಂಸ್ಥೆಗಳು 6,138 ಕೋಟಿ ರೂ. ವಂಚಿಸಿರುವುದಾಗಿ ತಿಳಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)