varthabharthi

ಅಂತಾರಾಷ್ಟ್ರೀಯ

ಸಿರಿಯ ಸಂಘರ್ಷದಲ್ಲಿ ಮೃತರ ಸಂಖ್ಯೆ 3.50 ಲಕ್ಷ

ವಾರ್ತಾ ಭಾರತಿ : 13 Mar, 2018

ಬೈರೂತ್ (ಲೆಬನಾನ್), ಮಾ. 13: ಸಿರಿಯದಲ್ಲಿ 7 ವರ್ಷಗಳಿಂದ ನಡೆಯುತ್ತಿರುವ ಆಂತರಿಕ ಯುದ್ಧದಲ್ಲಿ ಮೃತರ ಸಂಖ್ಯೆ 3.50 ಲಕ್ಷವನ್ನು ದಾಟಿದೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಸೋಮವಾರ ಬಿಡುಗಡೆ ಮಾಡಿದ ಅಂಕಿಸಂಖ್ಯೆಗಳು ಹೇಳಿವೆ.

2011 ಮಾರ್ಚ್ 15ರಿಂದ 3,53,935 ಮಂದಿ ಮೃತಪಟ್ಟಿದ್ದಾರೆ ಎಂದು ಬ್ರಿಟನ್‌ನಲ್ಲಿ ನೆಲೆ ಹೊಂದಿರುವ ವೀಕ್ಷಣಾಲಯ ತಿಳಿಸಿದೆ. ಅದು ಸಿರಿಯದಲ್ಲಿ ವ್ಯಾಪಕ ಮಾಹಿತಿ ಜಾಲವನ್ನು ಹೊಂದಿದೆ.

ಸುದೀರ್ಘ ಸಂಘರ್ಷವು ನಾಗರಿಕರ ಮೇಲೆ ವಿನಾಶಕಾರಿ ಪರಿಣಾಮವನ್ನು ಉಂಟು ಮಾಡಿದೆ.

ವೀಕ್ಷಣಾಲಯದ ಪ್ರಕಾರ, 7 ವರ್ಷಗಳ ಸಂಘರ್ಷದಲ್ಲಿ 1,06,390 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ ಮಕ್ಕಳ ಸಂಖ್ಯೆ 19,811 ಮತ್ತು ಮಹಿಳೆಯರ ಸಂಖ್ಯೆ 12,513.

ಈ ಅವಧಿಯಲ್ಲಿ 63,820 ಸರಕಾರಿ ಸೈನಿಕರು ಹಾಗೂ 58,130 ಸರಕಾರದ ಪರವಾಗಿ ಹೋರಾಡಿದ ಬಾಡಿಗೆ ಸೈನಿಕರು ಸತ್ತಿದ್ದಾರೆ. ಬಾಡಿಗೆ ಸೈನಿಕರಲ್ಲಿ ಲೆಬನಾನ್‌ನ ಹಿಝ್ಬುಲ್ಲಾ ಸಂಘಟನೆಯ ಸದಸ್ಯರೂ ಸೇರಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)