varthabharthi

ಅಂತಾರಾಷ್ಟ್ರೀಯ

ಫೆಲೆಸ್ತೀನ್ ಪ್ರಧಾನಿಯ ಬೆಂಗಾವಲು ವಾಹನಗಳ ಮೇಲೆ ಬಾಂಬ್ ದಾಳಿ

ವಾರ್ತಾ ಭಾರತಿ : 13 Mar, 2018

ಗಾಝಾ ಪಟ್ಟಣ (ಫೆಲೆಸ್ತೀನ್), ಮಾ. 13: ಮಂಗಳವಾರ ಗಾಝಾ ಪಟ್ಟಿಯ ಭೇಟಿಗೆ ಬಂದ ಫೆಲೆಸ್ತೀನ್ ಪ್ರಧಾನಿ ರಮಿ ಹಮ್‌ದಲ್ಲಾರ ವಾಹನಗಳ ಸಾಲನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಲಾಗಿದೆ.

ದಾಳಿಯಲ್ಲಿ ಫೆಲೆಸ್ತೀನ್ ಪ್ರಧಾನಿಗೆ ಗಾಯವಾಗಿಲ್ಲ. ಆದರೆ, ಇತರ ಏಳು ಮಂದಿ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.

ಫೆಲೆಸ್ತೀನ್ ಪ್ರಧಾನಿಯ ವಾಹನಗಳ ಸಾಲು ಗಾಝಾ ಪಟ್ಟಿಯನ್ನು ಪ್ರವೇಶಿಸುತ್ತಿರುವಂತೆಯೇ ಸ್ಫೋಟ ಸಂಭವಿಸಿದೆ ಎಂದು ಭದ್ರತಾ ಮೂಲವೊಂದು ತಿಳಿಸಿದೆ.

ಗಾಝಾ ಪಟ್ಟಿಯ ಆಡಳಿತವು ಹಮಾಸ್ ನಿಯಂತ್ರಣದಲ್ಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)