varthabharthi

ಕ್ರೀಡೆ

ಅಮೊಲ್ ರಾಜಸ್ಥಾನ ಬ್ಯಾಟಿಂಗ್ ಕೋಚ್

ವಾರ್ತಾ ಭಾರತಿ : 14 Mar, 2018

ಜೈಪುರ, ಮಾ.13: ದೇಶೀಯ ಕ್ರಿಕೆಟ್‌ನ ಮಾಜಿ ಅಗ್ರಮಾನ್ಯ ಆಟಗಾರ ಅಮೋಲ್ ಮುಝುಂದಾರ್ ಮುಂಬರುವ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

ಮುಝುಂದಾರ್ ಅವರೊಂದಿಗೆ ಕ್ರಿಕೆಟ್ ಮುಖ್ಯಸ್ಥ ಝುಬಿನ್ ಭರೂಚ ಹಾಗೂ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಳೆ ಮಾ.13 ರಂದು ಜೈಪುರದಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ತಂಡದ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

 ‘‘ತಂಡದ ಬ್ಯಾಟಿಂಗ್ ಕೋಚ್ ಆಗಿ ಅಮೋಲ್ ಮುಝುಂದಾರ್‌ರನ್ನು ಆಯ್ಕೆ ಮಾಡಿದ್ದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ. ದೇಶೀಯ ಕ್ರಿಕೆಟ್‌ನಲ್ಲಿ ಅವರ ದಾಖಲೆ ಎಲ್ಲವನ್ನೂ ಹೇಳುತ್ತಿದೆ. ಯುವ ಆಟಗಾರರು ಅಮೋಲ್‌ರಿಂದ ಸಾಕಷ್ಟು ಕಲಿಯಲು ಸಾಧ್ಯವಿದೆ’’ ಎಂದು ಭರೂಚ ಹೇಳಿದ್ದಾರೆ. ಮುಂಬೈ ಪರ 171 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಮುಝುಂದಾರ್ 48.13ರ ಸರಾಸರಿಯಲ್ಲಿ 11,167 ರನ್ ಗಳಿಸಿದ್ದಾರೆ. ಇದರಲ್ಲಿ 30 ಶತಕ ಹಾಗೂ 60 ಅರ್ಧಶತಕಗಳಿವೆ. ಮುಝುಂದಾರ್ ಹರ್ಯಾಣ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್‌ನ ಚೊಚ್ಚಲ ಪಂದ್ಯದಲ್ಲಿ 260 ರನ್ ಗಳಿಸಿದ್ದು, ಇದೊಂದು ವಿಶ್ವ ದಾಖಲೆಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)