ಪಿ.ಜಯರಾಮ ದಾಸ್
ಮೂಡುಬಿದಿರೆ, ಮಾ.17: ವಿಶ್ರಾಂತ ಶಿಕ್ಷಕ ಪಿ. ಜಯರಾಮ ದಾಸ್ (80) ಅಲ್ಪಕಾಲದ ಅಸೌಖ್ಯದಿಂದ ಕಳೆದ ಮಾ 10 ರಂದು ನಿಧನ ಹೊಂದಿದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮೂಡುಬಿದಿರೆಯ ಜೈನ್ ಹೈಸ್ಕೂಲಿನಲ್ಲಿ ಮೂರೂವರೆ ದಶಕಗಳ ಕಾಲ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವಿಜ್ಞಾನ ಬೋಧನೆಗೆ ಸಂಬಂಧಿಸಿದಂತೆ ತರಬೇತಿ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಅವರು ತಮ್ಮ ಸೇವಾವಧಿಯಲ್ಲಿ ಗುರುತಿಸಿಕೊಂಡಿದ್ದರು. ಚೂರ್ಣಿಕಗಳನ್ನು ರಚಿಸಿ ಹಾಡುವಲ್ಲಿಯೂ ಅವರು ಜನಪ್ರಿಯರಾಗಿದ್ದರು.
ಬೆಂಗಳೂರಿನಲ್ಲಿರುವ ಪುತ್ರನ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಅವರನ್ನು ಅನಾರೋಗ್ಯದ ನಿಮಿತ್ತ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Next Story