ವಿಷ್ಣುಮೂರ್ತಿ ಭಟ್
ಮೂಡುಬಿದಿರೆ, ಮಾ. 21: ಶ್ರೀ ಮಹಾವೀರ ಕಾಲೇಜಿನ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ ವಿಷ್ಣುಮೂರ್ತಿ ಭಟ್ (75) ಬುಧವಾರ ನಿಧನರಾದರು.
ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಮೂಲತ: ಪುತ್ತೂರಿನವರಾದ ವಿಷ್ಣುಮೂರ್ತಿ ಭಟ್ ಅವರು ಮೂಡುಬಿದಿರೆ ಜೈನ್ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ವೃತ್ತಿ ಜೀವನ ವನ್ನು ಪ್ರಾರಂಭಿಸಿ ಬಳಿಕ ಮಹಾವೀರ ಕಾಲೇಜು ಸೇರಿ 28 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದರು.
Next Story