ಉಪ್ಪಿನಂಗಡಿ: ಮನೆಗೆ ನುಗ್ಗಿ ನಗ- ನಗದು ದರೋಡೆ
ಉಪ್ಪಿನಂಗಡಿ, ಮಾ. 21: ಮನೆಗೆ ನುಗ್ಗಿದ ಇಬ್ಬರ ತಂಡವೊಂದು ಮನೆಯಲ್ಲಿದ್ದವರನ್ನು ಚಾಕು, ಚೂರಿ, ಪಿಸ್ತೂಲ್ ತೋರಿಸಿ ಬೆದರಿಸಿ ನಗ- ನಗದು ದರೋಡೆ ಮಾಡಿದ ಘಟನೆ ಇಚಿಲಂಪಾಡಿಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಇಲ್ಲಿನ ನಾರಾಯಣ ಪಿಳ್ಳೆ ಎಂಬವರ ಮನೆಗೆ ನುಗ್ಗಿದ ಇಬ್ಬರು ಮನೆಯವರನ್ನು ಬೆದರಿಸಿ 35 ಸಾವಿರ ರೂ. ನಗದು ಹಾಗೂ 8 ಪವನ್ ಚಿನ್ನ, 2 ಮೊಬೈಲ್ ಗಳನ್ನು ದೋಚಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಈ ಸಂದರ್ಭ ಮನೆಯಲ್ಲಿ ನಾರಾಯಣ ಪಿಳ್ಳೆ ಮತ್ತು ಅವರ ಪತ್ನಿ ಮಾತ್ರ ಇದ್ದು 7:30ರ ಸುಮಾರಿಗೆ ಏಕಾಏಕಿ ನುಗ್ಗಿದ ತಂಡ ಚಾಕು, ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದಾರೆ. ಸುಮಾರು 15 ನಿಮಿಷ ಇವರು ಮನೆಯಲ್ಲೇ ಇದ್ದು, ಮಲೆಯಾಳಂ ಭಾಷೆ ಮಾತಾನಾಡುತ್ತಿದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ತೆರಳಿದ್ದು, ದೂರು ದಾಖಲಿಸಿಕೊಂಡಿದ್ದಾರೆ.
Next Story