ಸುಳ್ಯ: ರಸ್ತೆ ಅಪಘಾತಕ್ಕೆ ತಂದೆ, ಮಗಳು ಬಲಿ
ಸುಳ್ಯ, ಮಾ. 24: ಇಲ್ಲಿನ ಅರಂಬೂರಿನಲ್ಲಿ ರಿಕ್ಷವೊಂದಕ್ಕೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ತಂದೆ ಮತ್ತು ಮಗಳು ಮೃತಪಟ್ಟು ಮಹಿಳೆಯೋರ್ವರು ಗಾಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.
ಪೆರಾಜೆ ಗ್ರಾಮದ ಚಿತ್ತರಂಜನ್ (30) ಹಾಗು ಅವರ ಪುತ್ರಿ ದಿಯಾ ಮೃತರು ಎಂದು ಗುರುತಿಸಲಾಗಿದೆ.
ಅರಂಬೂರಿನಿಂದ ಸುಳ್ಯ ಕಡೆ ಚಿತ್ತರಂಜನ್, ಅವರ ಪತ್ನಿ ಮತ್ತು ಪುತ್ರಿ ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ಲಾರಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ತಂದೆ ಮತ್ತು ಮಗಳು ಮೃತಪಟ್ಟಿದ್ದು, ಚಿತ್ತರಂಜನ್ ಅವರ ಪತ್ನಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.
Next Story