ರಾಜಮೌಳಿ ಚಿತ್ರಕ್ಕೆ ಜ್ಯೂ.ಎನ್ಟಿಆರ್, ರಾಮ್ಚರಣ್
ಬಾಹುಬಲಿ2 ನಂತರ ನಿರ್ದೇಶಕ ರಾಜಮೌಳಿ ಅವರ ಮುಂದಿನ ಚಿತ್ರ ಯಾವುದೆಂದು ಸಿನೆಮಾಪ್ರಿಯರು ಕಾತರದಿಂದ ನಿರೀಕ್ಷಿಸುತ್ತಲೇ ಇದ್ದರು. ಕೊನೆಗೂ ರಾಜಮೌಳಿ ತನ್ನ ಹೊಸ ಪ್ರಾಜೆಕ್ಟ್ನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಜೊತೆಗೆ ಚಿತ್ರದ ನಾಯಕರಾಗಿ ರಾಮ್ಚರಣ್ ತೇಜಾ ಹಾಗೂ ಜೂನಿಯರ್ ಎನ್ಟಿಆರ್ ನಟಿಸಲಿರುವುದನ್ನು ಖಚಿತಪಡಿಸಿದ್ದಾರೆ.
ಈ ಚಿತ್ರಕ್ಕೆ ಆರ್ಆರ್ಆರ್ ಎಂದು ಹೆಸರಿಡಲಾಗಿದೆ ಯೆಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆಯಾದರೂ, ಅದನ್ನು ರಾಜಮೌಳಿ ಈ ತನಕ ದೃಢಪಡಿಸಿಲ್ಲ.
ಇಷ್ಟಕ್ಕೂ ರಾಮ್ಚರಣ್ ಹಾಗೂ ಜೂ.ಎನ್ಟಿಆರ್, ರಾಜಮೌಳಿ ನಿರ್ದೇಶನದ ಚಿತ್ರಗಳಲ್ಲಿ ನಟಿಸಿರುವುದು ಇದು ಮೊದಲೇನಲ್ಲ. ರಾಜಮೌಳಿ ನಿರ್ದೇಶನದ ಮಗಧೀರದಲ್ಲಿ ರಾಮ್ಚರಣ್ ತೇಜಾ ಹಾಗೂ ಸ್ಟೂಡೆಂಟ್ ನಂ.1ರಲ್ಲಿ ಜ್ಯೂ.ಎನ್.ಟಿ.ಆರ್ ನಾಯಕ ಪಾತ್ರದಲ್ಲಿ ನಟಿಸಿದ್ದರು. ಈ ಎರಡೂ ಚಿತ್ರಗಳು ಭರ್ಜರಿ ಯಶಸ್ಸು ಕಂಡಿದ್ದವು. ರಾಜವೌಳಿ, ಜ್ಯೂ.ಎನ್.ಟಿ.ಆರ್ ಹಾಗೂ ರಾಮ್ಚರಣ್ ಅವರ ಭರ್ಜರಿ ಕಾಂಬಿನೇಶನ್ನ ಈ ಚಿತ್ರ ಬಾಕ್ಸ್ಆಫೀಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.